ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ಅಮಾಯಕ ಜೀವ ಬಲಿ

Spread the love

ಹುಬ್ಬಳ್ಳಿ; ವೈದ್ಯರ ನಿರ್ಲಕ್ಷ್ಯಕ್ಕೆ ಎರಡು ಅಮಾಯಕ ಜೀವಗಳು ಬಲಿಯಾಗಿರುವ ಘಟನೆ ಧಾರವಾಡ ಜಿಲ್ಲೆಯ ಕಲಗಟಗಿ ತಾಲೂಕಿನ ಸಿಗ್ಗಟ್ಟಿ ತಾಂಡಾದಲ್ಲಿ ನಡೆದಿದೆ. ಪಾರ್ವತಿ ಲಾಮಾಣಿ ಎಂಬಾಕಿಯೇ ಮೃತ ಗರ್ಭಿಣಿ ಆಗಿದ್ದಾಳೆ. ಈಗಾಗಲೇ ಮೂರು ಮಕ್ಕಳ ತಾಯಿಯಾಗಿರೋ ಮೃತ ಪಾರ್ವತಿ ನಾಲ್ಕನೇ ಮಗುವಿನ ಡೆಲಿವರಿಗಾಗಿ ಕಲಗಟಗಿ ತಾಲೂಕಾಸ್ಪತ್ರೆಗೆ ಬಂದಿದ್ರು. ಈ ವೇಳೆ ತಾಲೂಕಾಸ್ಪತ್ರೆ ವೈದ್ಯರು ಗರ್ಭಿಣಿ ಮಹಿಳೆಗೆ ಚಿಕಿತ್ಸೆ ನೀಡಲು ತಡವಾಗಿದ್ರಿಂದ ಡೆಲೆವರಿಗೂ ಮೊದಲೇ ಬೆಳಗಿನ ಜಾವ ಮಗು ಸಾವನ್ನಪ್ಪಿದೆ. ಬಳಿಕ ಗರ್ಭಿಣಿ ತಾಯಿಗೆ ತೀವ್ರ ರಕ್ತಸ್ರಾವ ಉಂಟಾಗಿದ್ರಿಂದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರೆಫರ್ ಮಾಡಿದ್ದಾರೆ. ಈ ವೇಳೆ ಮಾರ್ಗ ಮಧ್ಯೆಯೇ ಪಾರ್ವತಿ ಸಾವನ್ನಪ್ಪಿದ್ದಾಳೆ. ಅದಾದ ಬಳಿಕ ಮೃತ ಪಾರ್ವತಿ ಕುಟುಂಬಸ್ಥರು ಕಲಗಟಗಿ ತಾಲೂಕಾಸ್ಪತ್ರೆ ಎದುರು ಶವ ಇಟ್ಟು ಪ್ರತಿಭಟನೆ ಮಾಡಿದ್ರು. ಜೊತೆಗೆ ಸುಮಾರು ಇನ್ನೂರರಿಂದ ಮುನ್ನೂರು ಜನ ಸೇರಿ ಬೆಳಗ್ಗೆಯಿಂದ ಧರಣಿ ನಡೆಸಿ ನ್ಯಾಯಕ್ಕಾಗಿ ಬೇಡಿಕೆಯನ್ನಿಟ್ಟಿದ್ರು. ಈ ವೇಳೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕಲಗಟಗಿ ಶಾಸಕ ಸಿ ಎಂ ನಿಂಬಣ್ಣವರ್ 10 ಸಾವಿರ ಹಣ ನೀಡುತ್ತೇನೆ. ಶವ ಸಂಸ್ಕಾರ ಮಾಡಿ ಅಂತ ಮನವಿ ಮಾಡಿದ್ರು. ಅದಕ್ಕು ಜಗ್ಗದೇ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತೀವ್ರ ಪ್ರತಿಭಟನೆ ಮುಂದುವರೆಸಿದ್ರು. ಪ್ರತಿಭಟನೆ ತೀವ್ರತೆ ಹೆಚ್ಚಾಗಿದ್ರಿಂದ ಘಟನಾ ಸ್ಥಳಕ್ಕೆ ಧಾರವಾಡ ಡಿಎಚ್ಓ ಕರಿಗವೌಡರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಈ ವೇಳೆ ಡಿಎಚ್ಓ ಕಡಿಗೌಡರ್ ಜೊತೆಗೆ ಗ್ರಾಮಸ್ಥರು ಸ್ಥಳದಲ್ಲೇ ಪರಿಹಾರ ನೀಡಬೇಕು ಅಂತ ಪಟ್ಟು ಹಿಡಿದ್ರು. ಇದನ್ನ ಗಮನಿಸಿದ ಡಿಎಚ್ಓ ಕರಿಗೌಡರ್ ಘಟನೆ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಜೊತೆಗೆ ಘಟನೆ ಬಗ್ಗೆ ಒಂದು ತಂಡ ರಚಿಸಿ ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥ ವೈದ್ಯರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ರು. ಅಷ್ಟೇ ಅಲ್ಲದೆ ಘಟನಾ ಸ್ಥಳಕ್ಕೆ ಕಲಗಟಗಿ ತಹಸೀಲ್ದಾರ್ ಯಲ್ಲಪ್ಪ ಗೋಣೆನ್ನವರ್ ಕೂಡಾ ಭೇಟಿ ನೀಡಿ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ತಾಯಿ, ಮಗುವಿಗೆ ಆದ ಅನ್ಯಾಯಕ್ಕೆ ನ್ಯಾಯ ವದಗಿಸುತ್ತೇವೆ ಅಂತ ಭರವಸೆ ನೀಡಿದ್ರು.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply