ಬೆಂಗಳೂರು: ಎಸ್ಡಿಪಿಐ ವಿಚಾರವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೀಡಿರುವ ಹೇಳಿಕೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಲ್ಹಾದ್ ಜೋಶಿ ಅವರಿಗೆ ಟಕ್ಲರ್ ಕೊಟ್ಟಿದ್ದಾರೆ..
ಟ್ವೀಟ್ ಮೂಲಕ ತಮ್ಮ ಕಿಡಿಕಾರಿರುವ ಅವರು, ಎಸ್ಡಿಪಿಐ ಕಾಂಗ್ರೆಸ್ ಕೂಸು ಎಂದಿರುವ ಪ್ರಹ್ಲಾದ್ ಜೋಶಿ ಯಾರ ಕಿವಿಗೆ ಹೂ ಮುಡಿಸುತ್ತಿದ್ದಾರೆ?. ಮುಸ್ಲಿಮರನ್ನು ಪ್ರಚೋದಿಸಿ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿರುವ ಎಸ್ಡಿಪಿಐ ಕಾಂಗ್ರೆಸ್ ಕೂಸಾಗಲು ಸಾಧ್ಯವೆ? ಎಸ್ಡಿಪಿಐ ಮತ್ತು ಓವೈಸಿಯ ಎಐಎಂಐಎಂ ಪಕ್ಷ ಬಿಜೆಪಿಯ ಬಿ ಟೀಂ ಅನ್ನೋದು ದೇಶಕ್ಕೆ ಗೊತ್ತಿದೆ. ಈ ಬಗ್ಗೆ ಜೋಶಿಯವರು ಎದೆ ತಟ್ಟಿ ಹೇಳುತ್ತಾರೆಯೇ? ಎಂದು ಕೇಳಿದ್ದಾರೆ.
ಸಚಿವ ಪ್ರಹ್ಲಾದ್ ಜೋಶಿಯವರು ಗಾಳಿಯಲ್ಲಿ ಗುಂಡು ಹಾರಿಸುವ ಬದಲು ಎಸ್ಡಿಪಿಐ, ಓವೈಸಿಯ ಎಐಎಂಐಎಂ ಹಾಗೂ ನಾಗಪುರ ನಡುವಿನ ಕನೆಕ್ಷನ್ ಏನು ಎಂಬುದನ್ನು ತಿಳಿಸಲಿ. ಆರ್ಎಸ್ಎಸ್ ಕೃಪಾ ಪೋಷಿತ ನಾಟಕ ಮಂಡಳಿಯಲ್ಲಿ ಎಸ್ಡಿಪಿಐ ಪಾತ್ರವೇನು? ಓವೈಸಿಯ ರೋಲ್ ಏನು ಎಂಬುದು ದೇಶಕ್ಕೆ ತಿಳಿಯಲಿ. ಈ ಸಂಘಟನೆಗಳಿಗೆ ನಾಗಪುರದ ಕನೆಕ್ಷನ್ ಇಲ್ಲದಿದ್ದರೆ ಈ ಕೂಡಲೇ ಎಸ್ಡಿಪಿಐ ಅನ್ನು ನಿಷೇಧಿಸಲಿ ಎಂದು ಆಗ್ರಹಿಸಿದ್ದಾರೆ.ಎಸ್ಡಿಪಿಐನ ರಾಜಕೀಯ ಲಾಭ ಪಡೆಯುತ್ತಿರುವ ಬಿಜೆಪಿಯವರು ಎಸ್ಡಿಪಿಐ ಸಂಘಟನೆ ಕಾಂಗ್ರೆಸ್ ಕೂಸು ಎಂದು ಆರೋಪಿಸುವುದ್ಯಾಕೆ?. ಎಸ್ಡಿಪಿಐ ಸಂಘಟನೆಯ ಬಗ್ಗೆ ಕಾಂಗ್ರೆಸ್‌ಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿಯ ಸರ್ಕಾರವೇ ಇದೆ. ಎಸ್ಡಿಪಿಐ ಸಂಘಟನೆಯನ್ನು ನಿಷೇಧಿಸದಂತೆ ಬಿಜೆಪಿಯವರ ಕೈಕಟ್ಟಿ ಹಾಕಿರುವವರರು ಯಾರು? ತಾಕತ್ತಿದ್ದರೆ ನಿಷೇಧಿಸಲಿ ಎಂದು ಸವಾಲು ಹಾಕಿದ್ದಾರೆ.
ಎಸ್ಡಿಪಿಐ ಸಂಘಟನೆ ಬಿಜೆಪಿಯ ಪಾಲಿಗೆ ಕಲ್ಪವೃಕ್ಷ ಇದ್ದಂತೆ. ಎಸ್ಡಿಪಿಐ ಸಂಘಟನೆ ನಿಷೇಧವಾಗುವುದು ಬಿಜೆಪಿಯವರಿಗೂ ಸುತಾರಾಂ ಇಷ್ಟವಿಲ್ಲ. ಈ ಸತ್ಯ ಜೋಶಿಯವರಿಗೂ ಗೊತ್ತಿದೆ. ಆದರೂ ಜೋಶಿಯವರು ಜನರ ಕಣ್ಣಿಗೆ ಮಣ್ಣೆರೆಚಲು ಎಸ್ಡಿಪಿಐನೊಂದಿಗೆ ಕಾಂಗ್ರೆಸ್‌ಗೆ ಸಂಬಂಧ ಕಲ್ಪಿಸುತ್ತಾರೆ. ಅಷ್ಟಕ್ಕೂ ಎಸ್ಡಿಪಿಐ ಸಂಘಟನೆಯಿಂದ ಕಾಂಗ್ರೆಸ್‌ಗೆ ಏನು ಲಾಭ ಜೋಶಿಯವರೆ? ಎಂದು ಖಾರವಾಗಿ ಪ್ರಶ್ನೆ ಕೇಳಿದ್ದಾರೆ.
Check Also
ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ
Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …