Breaking News

ಶ್ರೀರಾಮನ ಜನ್ಮಸ್ಥಳಕ್ಕೆ ತೆರಳಿದವರು ರಾಮನ ಪಾದ ಸೇರಿದ್ರು

Spread the love

ಬೀದರ್ : ಉತ್ತರ ಪ್ರದೇಶದ ಬಹರಾಯಿಚ್ ಜಿಲ್ಲೆಯ ನೌನಿಹಾ ಮಂಡಿ‌ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ನ ಏಳು ಜನ ಮೃತಪಟ್ಟು, ಎಂಟಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿರುವ ಘಟನೆ‌ ಇಂದು ನಡೆದಿದೆ. ಅಯೋಧ್ಯ ಸೇರಿದಂತೆ ತೀರ್ಥ ಯಾತ್ರೆಗೆ ಟ್ರಾವೆಲರ್ ನಲ್ಲಿ ತೆರಳಿದ್ದರು‌. ಮೃತಪಟ್ಟವರೆಲ್ಲರೂ ಬೀದರ ನಗರದ ಗುಂಪಾ ಪ್ರದೇಶದವರು ಆಗಿದ್ದಾರೆ.

ಉತ್ತರ ಪ್ರದೇಶದ ತೀರ್ಥ ಕ್ಷೇತ್ರಗಳಿಗೆ ಇಲ್ಲಿನ ಗುಂಪಾದ ಎರಡು ಕುಟುಂಬಗಳು ಬೆಂಗಳೂರಿನಿಂದ ಪ್ರವಾಸಕ್ಕೆ ತೆರಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಬಹರಾಯಿಚ್ ಕಡೆಯಿಂದ ಬರುತ್ತಿದ್ದ ಟ್ರಾವೆಲರ್ ಮತ್ತು ಲಖಿಮಪೂರ ಖಾರಿ ಕಡೆಯಿಂದ ಬರುತಿದ್ದ ಟ್ರಕ್ ನಡುವೆ‌ ಮುಖಾಮುಖಿ‌ ಡಿಕ್ಕಿ ಸಂಭವಿಸಿದೆ.

ಮೃತಪಟ್ಟವರನ್ನು ಶಿವಕುಮಾರ ಪೂಜಾರ (28), ಜಗದೇವಿ (52), ಮನ್ಮಥ (36), ಅನೀಲ‌ ವಿಜಯಕುಮಾರ (30), ಸಂತೋಷ ಕಾಶಿನಾಥ (30), ಶಶಿಕಲಾ ರಾಜಕುಮಾರ (38) ಮತ್ತು ಸರಸ್ವತಿ ಜಗನ್ನಾಥ (47) ಎಂದು ಗುರುತಿಸಲಾಗಿದೆ.


Spread the love

About Karnataka Junction

[ajax_load_more]

Check Also

ವಲಯ ಅರಣ್ಯಧಿಕಾರಿ ಸೇವಾಲಾಲ ಮಾಲಾಧಾರಿಗಳು ಅವಾಚ್ಯವಾಗಿ ನಿಂಧಿಸಿದ್ದಾರೆ ಎಂದು ಆರೋಪಿಸಿ: ಮನವಿ

Spread the love ಕಲಘಟಗಿ: ಫೆ. 15 ರಂದು ಜರುಗುವ ಸಂತ ಸೇವಾಲಾಲ ಜಯಂತಿ ಅಂಗವಾಗಿ ಸೇವಾಲಾಲ ಮಾಲಾಧಾರಿಗಳು ಅರಣ್ಯ …

Leave a Reply

error: Content is protected !!