Breaking News

ಮದುವೆ ಆಗಿ 6 ವರ್ಷಗಳೇ ಕಳೆದ್ರೂ ಇನ್ನೂ ಏನು ಆಗಿಲ್ವಂತೆ !

Spread the love

ಒಡಿಶಾ : ಒಡಿಶಾ ಸಂಸದ ಅನುಭವ ಮೊಹಂತಿ ಹಾಗೂ ನಟಿ ವರ್ಷಾ ಪ್ರಿಯದರ್ಶಿನಿ ನಡುವೆ ಡಿವೋರ್ಸ್ ಕೇಸ್ ಇದೀಗ ಭಾರತದಲ್ಲೇ ಚರ್ಚೆಯಾಗುತ್ತಿದೆ. ಈ ಸೆಲೆಬ್ರೆಟಿಗಳ ಡಿವೋರ್ಸ್ ಪ್ರಕರಣ ಕೇವಲ ಕೋರ್ಟ್ ಕಟಕಟೆಯಲ್ಲಿ ಮಾತ್ರ ನಿಂತಿಲ್ಲ, ಬೀದಿ ಜಗಳವಾಗಿ ಮಾರ್ಪಟ್ಟಿದೆ. 6 ವರ್ಷವಾದರೂ ಇದುವರೆಗೂ ಪತ್ನಿಯೊಂದಿಗೆ ಸಂಭೋಗವೇ ನಡೆಸಿಲ್ಲ ಎಂದು ಅನುಭವ್ ಬೆಡ್ ರೂಂ ಸೀಕ್ರೆಟ್ ಬಹಿರಂಗ ಪಡಿಸಿದ್ದಾರೆ. ಇವರ ರಂಪಾಟ ನೋಡಿದ ಕೋರ್ಟ್, ಇಬ್ಬರಿಗೂ ಖಡಕ್ ವಾರ್ನಿಂಗ್ ನೀಡಿದೆ.

ಅನಭವ್ ಮೊಹಂತಿ ಹಾಗೂ ವರ್ಷಾ ಪ್ರಿಯದರ್ಶಿನ ವಿಚ್ಚೇದನ ಕೇಸ್ ಹೈಕೋರ್ಟ್‌ನಲ್ಲಿದೆ. ವಿಚಾರಣೆಯೂ ನಡೆಯುತ್ತಿರುವ ಬೆನ್ನಲ್ಲೇ ಪತ್ನಿಗೆ ಡಿವೋರ್ಸ್ ಯಾಕೆ ನೀಡುತ್ತಿದ್ದೇನೆ ಎಂದು ಸಾಮಾಜಿಕ ಜಾಲತಾಣಧಲ್ಲಿ ಅನುಭವ್ ಮೊಹಂತಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ತಾನು ಮದುವೆಯಾಗಿ 6 ವರ್ಷ ಕಳೆದಿದೆ. ಇದುವರೆಗೂ ಲೈಂಗಿಕ ಸಂಪರ್ಕ ನಡೆದಿಲ್ಲ. ದಾಂಪತ್ಯ ಜೀವನದಲ್ಲಿ ಲೈಂಗಿಕತೆ ಅವಿಭಾಜ್ಯ ಅಂಗವಾಗಿದೆ. ಆದರೆ ಪತ್ನಿ 6 ವರ್ಷಗಳಿಂದ ನಿರಾಕರಿಸುತ್ತಲೇ ಬಂದಿದ್ದಾಳೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಪ್ರೀತಿ, ಸಂಸಾರ ಉಳಿಸಿಕೊಳ್ಳಲು ಕಳೆದ 6 ವರ್ಷಗಳಿಂದ ಪ್ರಯತ್ನಿಸಿದ್ದೇನೆ. ಇನ್ನು ಸಾಧ್ಯವಿಲ್ಲ. ಪತ್ನಿಯ ಅಸಲಿ ಮುಖವನ್ನು ಮುಂದಿನ ವಿಡಿಯೋದಲ್ಲಿ ಬಹಿರಂಗ ಪಡಿಸುತ್ತೇನೆ ಎಂದು ಅನುಭವ್ ಮೊಹಂತಿ ಹೇಳಿದ್ದರು. ಇದರ ಬೆನ್ನಲ್ಲೇ ನಟಿ ವರ್ಷಾ ಪ್ರಿಯದರ್ಶಿನಿ, ತನ್ನ ವಿರುದ್ಧ ಪತಿ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಕೋರ್ಟ್‌ಗೆ ಮನವಿ ಮಾಡಿದ್ದರು.

ವಿಚಾರಣೆ ಹಾಜರಾದ ಅನುಭವ್ ಮೊಹಂತಿ ಹಾಗೂ ವರ್ಷಾ ಪ್ರಿಯದರ್ಶಿನಿಗೆ ಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ. ಡಿವೋರ್ಸ್ ಅರ್ಜಿ ವಿಚಾರಣೆ ಹಂತದಲ್ಲಿದೆ. ಈ ವಿಚಾರಣೆ ಅಂತ್ಯವಾಗುವವರೆಗೂ ಆರೋಪ ಪ್ರತ್ಯಾರೋಪ ಮಾಡುವಂತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಪೋಸ್ಟ್ ಹಾಕುವಂತಿಲ್ಲ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.


Spread the love

About Karnataka Junction

    Check Also

    ಆನ್ ಲೈನ್ ಮೂಲಕ 14.72ಲಕ್ಷ ಹಣ ವಂಚನೆ

    Spread the love‘ ಹುಬ್ಬಳ್ಳಿ:ಆನ್‌ಲೈನ್’ ಅರೆಕಾಲಿಕ ಕೆಲಸದ (ಜಾಬ್) ಆಮಿಷಕ್ಕೆ ಮರುಳಾಗಿ ವ್ಯಕ್ತಿಯೊಬ್ಬರು ₹14.72ಲಕ್ಷ ಹಣವನ್ನು ಆನ್‌ಲೈನ್‌ನಲ್ಲಿ ಪಾವತಿಸಿ ಮೋಸ …

    Leave a Reply

    error: Content is protected !!