Breaking News

ಕ್ರಾಂತಿಕಾರಿ ಮಹಾನಾಯಕನ ಕರ್ಮಭೂಮಿಯಲ್ಲೂ ಮಸೀದಿ ವಿವಾದ

Spread the love

ವಿಜಯಪುರ : ಕಾಶಿಯ ಗ್ಯಾನ್‌ವ್ಯಾಪಿ ಮಸೀದಿ, ಮಂಡ್ಯದ ಶ್ರೀರಂಗಪಟ್ಟಣ, ದಕ್ಷಿಣ ಕನ್ನಡದ ಮಳಲಿ, ಕಲಬುರಗಿಯ ಬಹಮನಿ ಕೋಟೆಗಳ ಬಳಿಕ ಇದೀಗ ಭಕ್ತಿಭಂಡಾರಿ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದಲ್ಲೂ ಮಸೀದಿಗೆ ಸಂಬಂಧಿಸಿದ ವಿವಾದ ತಲೆದೋರಿದೆ. ಬಸವಕಲ್ಯಾಣದ ಪೀರಪಾಷಾ ಬಂಗ್ಲಾ ದರ್ಗಾದ ಆವರಣದಲ್ಲಿ ಹಿಂದೂ ಧಾರ್ಮಿಕ ಕುರುಹುಗಳಿದ್ದು, ಇದೇ ವಿಶ್ವದ ಮೊದಲ ಸಂಸತ್ತು ಎಂಬ ಅಭಿದಾನಕ್ಕೆ ಪಾತ್ರವಾದ ಬಸವಾದಿ ಶರಣರ ಕಾಲದ ಅನುಭವ ಮಂಟಪದ ಮೂಲ ಕಟ್ಟಡವಾಗಿದೆ ಎಂಬ ಕೂಗು ಕೇಳಿಬಂದಿದೆ. ಈ ನಿಟ್ಟಿನಲ್ಲಿ ಜೂ.12ರಂದು ವೀರಶೈವ ಲಿಂಗಾಯತ ಸಂಘಟನೆಗಳು ‘ಮಠಾಧೀಶರ ನಡೆ ಮೂಲ ಅನುಭವ ಮಂಟಪದ ಕಡೆ’ ಎಂಬ ರ್ಯಾಲಿಗೆ ಕರೆ ನೀಡಿವೆ.

ದೇಗುಲ-ಮಸೀದಿಗಳ ಗುದ್ದಾಟದ ಮಧ್ಯೆಯೇ ಈ ಹೊಸ ವಿವಾದ ಸೃಷ್ಟಿಯಾಗಿದೆ. ದರ್ಗಾದಲ್ಲಿ ಸಿಕ್ಕಿರುವ ಕುರುಹುಗಳು ಅನುಭವ ಮಂಟಪದ ಕುರುಹುಗಳು ಎಂಬ ವಾದ ಗಂಭೀರ ಚರ್ಚೆಗೆ ನಾಂದಿ ಹಾಡಿದೆ. ವಿಶ್ವದ ಮೊದಲ ಸಂಸತ್ತು ಎಂಬ ಅಭಿದಾನಕ್ಕೆ ಪಾತ್ರವಾಗಿರುವ 12ನೇ ಶತಮಾನದ ಅನುಭವ ಮಂಟಪವೇ ಈಗಿನ ಪೀರಪಾಷಾ ದರ್ಗಾ ಎಂದು ಹೇಳಲಾಗುತ್ತಿದೆ. ನಿಜಾಮರ ಆಡಳಿತ ಕಾಲದಲ್ಲಿ ಅನುಭವ ಮಂಟಪವನ್ನು ಕಬ್ಜಾ ಮಾಡಿ ದರ್ಗಾ ಮಾಡಲಾಗಿದೆ. ಇಲ್ಲಿ ದೇವಸ್ಥಾನ ಶೈಲಿ ಕಟ್ಟಡಗಳು, ಗೋಪುರ ಶೈಲಿಯ ಮೇಲ್ಛಾವಣಿ, ದೇವಾಲಯ ಕಟ್ಟಡ ಮಾದರಿಯ ಕಂಬಗಳು, ಶಿಲಾಬಾಲಿಕೆಯರ ಮೂರ್ತಿಗಳು ಇರುವುದು ತಿಳಿದುಬಂದಿದೆ ಎಂದು ಕೆಲವು ವೀರಶೈವ ಲಿಂಗಾಯತ ಸ್ವಾಮೀಜಿಗಳು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಒಂದಷ್ಟುಫೋಟೋಗಳು ಕೂಡ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ಸದ್ಯ ಪೀರಪಾಷಾ ದರ್ಗಾ ಹೈದ್ರಾಬಾದ್‌ ನವಾಬರ ಮನೆತನದವರ ವಶದಲ್ಲಿದೆ. ಆ ಮನೆತನದವರು ಆರೋಪಗಳನ್ನು ಅಲ್ಲಗೆಳೆದಿದ್ದಾರೆ. ದರ್ಗಾದಲ್ಲಿ ಅಂಥ ಯಾವುದೇ ಕುರುಹುಗಳಿಲ್ಲ ಎಂದು ಅವರು ಹೇಳಿದ್ದಾರೆ.


Spread the love

About Karnataka Junction

    Check Also

    ನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ಸಿದ್ಧತೆ

    Spread the loveನೇಹಾ ಹತ್ಯೆ ಕೇಸ್‌ – ಚಾರ್ಜ್ ಶೀಟ್ ಸಲ್ಲಿಸಲು ಸಿಐಡಿ ಸಿದ್ಧತೆ ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜಿನಲ್ಲಿ …

    Leave a Reply

    error: Content is protected !!