ಮಂಡ್ಯ : ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಹರಿಯುವ ಕಾವೇರಿಯ ಮಡಿಲಲ್ಲೇ ಅದೆಷ್ಟೋ ಮಂದಿ ಪಿಂಡ ಪ್ರದಾನ ಮಾಡಿ ಹಿರಿಯರ ಆತ್ಮಕ್ಕೆ ಶಾಂತಿಯನ್ನು ಕೋರಿ ಆಶೀರ್ವಾದವನ್ನು ಪಡೆಯುತ್ತಾರೆ. ಕಾವೇರಿಯ ನದಿಯ ತಟದಲ್ಲೇ ನಿಮಿಷಾಂಭೆಯು ನೆಲೆ ನಿಂತಿದ್ದಾಳೆ. ಈ ನದಿಯಲ್ಲಿ ಜನರು ಪಿಂಡವನ್ನು ಪ್ರದಾನ ಮಾಡುತ್ತಾರೆ. ಆದರೆ, ಇಲ್ಲಿ ವಿಚಿತ್ರವೆನಂದರೇ ವ್ಯಕ್ತಿಯೊಬ್ಬ ಬಿಎಂಡ್ಲ್ಯೂ ಕಾರನ್ನೇ ನದಿಯಲ್ಲಿ ಬಿಟ್ಟಿದ್ದಾನೆ.
ಕಾವೇರಿ ನದಿಯಲ್ಲಿ ದುಬಾರಿ ಬೆಲೆಯ ಬಿಎಂಡಬ್ಲ್ಯೂ ಕಾರು ಪತ್ತೆಯಾಗಿದೆ. ಮಂಡ್ಯದ ಶ್ರೀರಂಗಪಟ್ಟಣದ ಬಳಿಯ ನಿಮಿಷಾಂಭ ದೇಗುಲದ ಬಳಿಯಲ್ಲಿ ಐಷಾರಾಮಿ ಕಾರು ಕಾಣಿಸಿದೆ. ಕಾರೊಂದು ನದಿಯಲ್ಲಿರುವುದನ್ನು ಗಮನಿಸಿದ ಸ್ಥಳೀಯರು ಶ್ರೀರಂಗಪಟ್ಟಣ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಶ್ರೀರಂಗಪಟ್ಟಣ ಪೊಲೀಸರು ಕಾರನ್ನು ನದಿಯಿಂದ ಹೊರ ತೆಗೆದು ಕಾರಿನಲ್ಲಿ ಯಾರಾದರೂ ಇದ್ದಾರೆಯೇ ಎಂದು ಪರೀಕ್ಷಿಸಿದ್ದಾರೆ. ಆದರೆ ಕಾರಿನಲ್ಲಿ ಯಾರ ಶವ ಕೂಡ ಪತ್ತೆಯಾಗಿಲ್ಲ. ಯಾರೋ ಕದ್ದ ಕಾರನ್ನೋ ನೀರಿನಲ್ಲಿ ಬಿಟ್ಟು ಹೋಗಿರಬೇಕು ಎಂದು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಿವಾಸಿ ರೂಪೇಶ್ ಎಂಬುವವರಿಗೆ ಬಿಎಂಡಬ್ಲ್ಯೂ ಕಾರು ಸೇರಿದ್ದಾಗಿತ್ತು. ರೂಪೇಶ್‌ನ ವಿಳಾಸ ಮತ್ತು ನಂಬರ್ ಪತ್ತೆ ಹಚ್ಚಿದ ಪೊಲೀಸರಿಗೆ ಅಚ್ಚರಿಯಾಗಿತ್ತು. ತನ್ನ ತಾಯಿಯ ಸಾವನ್ನು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದ. ತನ್ನ ತಾಯಿ ಬಹುವಾಗಿ ಇಷ್ಟಪಡುತ್ತಿದ್ದ ಕಾರನ್ನು ನೀರಿನಲ್ಲಿ ಬಿಟ್ಟು ಅಮ್ಮನ ಆತ್ಮಕ್ಕೆ ಶಾಂತಿಕೊರಿದ್ದನಂತೆ ರೂಪೇಶ್.