ಹಾರ ಹಾಕುವಾಗ ವಧುವಿಗೆ ವರನ ಕೈ ತಾಗಿದಕ್ಕೆ ಮದುವೆಯೇ ಮುರಿದು ಬಿತ್ತು

Spread the love

ದಕ್ಷಿಣ ಕನ್ನಡ; ಮದುವೆಯ ವೇಳೆ ಮದು ಮಗಳ ಕೊರಳಿಗೆ ಮದುಮಗ ಹಾರ ಹಾಕುವಾಗ ಕೈತಾಗಿತೆಂದು ಕೋಪಗೊಂಡು ಹಾರವನ್ನು ಕುತ್ತಿಗೆಯಿಂದ ಬಿಸಾಡಿ ವಧು ಮದುವೆ ನಿರಾಕರಿಸಿದ ವಿಚಿತ್ರ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ನಾರಾವಿಯ ಕಲ್ಯಾಣ ಮಂಟಪವೊಂದರಲ್ಲಿ ನಾರಾವಿಯ ವರನಿಗೆ ಮೂಡುಕೊಣಾಜೆಯ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಸಂಪ್ರದಾಯದಂತೆ ವಧುವಿಗೆ ವರನು ಹಾರ ಹಾಕುವಾಗ ಅವಳ ಕೈಗೆ ವರನ ಕೈತಾಗಿತೆಂದು ಕೋಪಗೊಂಡ ವಧು ಹಾರವನ್ನು ಕುತ್ತಿಗೆಯಿಂದ ತೆಗೆದು ಬಿಸಾಡಿ ವರನಿಗೆ ಬೈದಿದ್ದಾಳೆ. ಈ ಸಂದರ್ಭದಲ್ಲಿ ಸ್ವಲ್ಪ ಗೊಂದಲ ಉಂಟಾಗಿ ವರನ ಹಾಗೂ ವಧುವಿನ ಕಡೆಯವರ ನಡುವೆ ಗಲಾಟೆ ನಡೆದಿದೆ.ನಂತರ ವೇಣೂರು ಪೊಲೀಸರು ಸ್ಥಳಕ್ಕೆ ಬಂದು ಸಮಾಧಾನ ಪಡಿಸಿದರೂ ಮದು ಮಗ ಮದುವೆಯನ್ನು ನಿರಾಕರಿಸಿದ್ದಾನೆ ಎಂದು ತಿಳಿದುಬಂದಿದೆ. ಅಲ್ಲದೇ ಮದುವೆಗೆಂದು ಸುಮಾರು ಸಾಲ ಮಾಡಿದ್ದು ಖರ್ಚಾದ ಎಲ್ಲಾ ಹಣವನ್ನು ಹುಡುಗಿಯ ಕಡೆಯವರೇ ನೀಡಬೇಕು ಎಂದು ಹಠ ಹಿಡಿದಿದ್ದಾನೆ. ಈ ಬಗ್ಗೆ ಎರಡೂ ಕಡೆಯವರನ್ನೂ ಮನವೊಲಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸಲಾಗಿದೆ ಎಂದು ತಿಳಿದುಬಂದಿದೆ.


Spread the love

Leave a Reply

error: Content is protected !!