Breaking News

ರಾಜಸ್ಥಾನ ಫೈನಲ್​ಗೆ ಎಂಟ್ರಿ, ಆರ್ ಸಿಬಿ ಪಂದ್ಯದಿಂದ ಹೊರಗೆ

Spread the love

ಅಹಮದಾಬಾದ್​: ಮಹತ್ವದ ಐಪಿಎಲ್ 2022ರ ಕ್ವಾಲಿಫೈಯರ್​ 2 ಪಂದ್ಯದಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್​ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್​​ ಫೈನಲ್​ಗೆ ಲಗ್ಗೆ ಹಾಕಿದೆ. 158ರನ್​​ಗಳ ಗುರಿ ಬೆನ್ನತ್ತಿದ ಸ್ಯಾಮ್ಸನ್ ಬಳಗ 18.1 ಓವರ್​ಗಳಲ್ಲಿ 161ರನ್​​ಗಳಿಸಿ ಜಯ ಸಾಧಿಸಿತು. ತಂಡದ ಪರ ಬಟ್ಲರ್(106) ಭರ್ಜರಿ ಆಟ ಪ್ರದರ್ಶಿಸಿದರು.ಅಹಮದಾಬಾದ್​ನ ಮೊಟೇರಾದ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಸೋತು ಚೊಚ್ಚಲ ಪ್ರಶಸ್ತಿ ಗೆಲ್ಲುವ ಕನಸು ಕಾಣುತ್ತಿದ್ದ ಆರ್​ಸಿಬಿ ಕನಸು ಕನಸಾಗಿ ಉಳಿದಿದೆ.
ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಟ್ಲರ್​ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಬಟ್ಲರ್​ಮಹತ್ವದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬೇಗನೆ ವಿರಾಟ್ ಕೊಹ್ಲಿ(7) ವಿಕೆಟ್​ ಕಳೆದುಕೊಂಡಿತು. ನಾಯಕ ಡುಪ್ಲೆಸಿಸ್​​(25), ಗ್ಲೆನ್ ಮ್ಯಾಕ್ಸ್​ವೆಲ್​(24)ರನ್​ಗಳ ಕೊಡುಗೆ ನೀಡಿದರು. ಇದಾದ ಬಳಿಕ ಬಂದ ಮಹಿಪಾಲ್​(8), ದಿನೇಶ್ ಕಾರ್ತಿಕ್​​(6), ಹಸರಂಗ(0) ಹರ್ಷಲ್ ಪಟೇಲ್(1) ಪೆವಿಲಿಯನ್​ ಸೇರಿಕೊಂಡರು. ಶಹಬಾಜ್​​ ಅಜೇಯ 12ರನ್​​ಗಳಿಕೆ ಮಾಡಿದರು. ತಂಡದ ಪರ ಏಕಾಂಗಿ ಹೋರಾಟ ನಡೆಸಿದ ರಜತ್ ಪಾಟಿದಾರ್ 58ರನ್​ಗಳಿಕೆ ಮಾಡಿದರು. ಹೀಗಾಗಿ, 20 ಓವರ್​​ಗಳ ಅಂತ್ಯಕ್ಕೆ ಆರ್​ಸಿಬಿ 8 ವಿಕೆಟ್​​ನಷ್ಟಕ್ಕೆ 157ರನ್​​ಗಳಿಕೆ ಮಾಡಿತು. ರಾಜಸ್ಥಾನ ಪರ ಪ್ರಸಿದ್ಧ ಕೃಷ್ಣ, ಒಬೆದ್​ ಮೆಕಾಯ್​ ತಲಾ ಮೂರು ವಿಕೆಟ್​ ಪಡೆದರೆ,ಟ್ರೆಂಟ್​ ಬೌಲ್ಟ್​ ಮತ್ತು ಅಶ್ವಿನ್​​ ತಲಾ 1 ವಿಕೆಟ್​ ಪಡೆದರು.ವಿಕೆಟ್ ಪಡೆದು ಮಿಂಚಿದ ರಾಜಸ್ಥಾನವಿಕೆಟ್ ಪಡೆದು ಮಿಂಚಿದ ರಾಜಸ್ಥಾನ158ರನ್​ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಜೈಸ್ವಾಲ್​ ಹಾಗೂ ಬಟ್ಲರ್ ಜೋಡಿ ತಂಡಕ್ಕೆ ಭದ್ರ ಬುನಾದಿ ಹಾಕಿತು. ಈ ಜೋಡಿ ಮೊದಲ ವಿಕೆಟ್​ನಷ್ಟಕ್ಕೆ ಕೇವಲ 5 ಓವರ್​ಗಳಲ್ಲಿ 61ರನ್​ಗಳಿಕೆ ಮಾಡಿತು. 21ರನ್​ಗಳಿಕೆ ಮಾಡಿದ್ದ ವೇಳೆ ಜೈಸ್ವಾಲ್ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಟ್ಲರ್ ಜೊತೆಯಾದ ಕ್ಯಾಪ್ಟನ್ ಸ್ಯಾಮನ್ಸ್​ ಕೂಡ ತಾವು ಎದುರಿಸಿದ 21 ಎಸೆತಗಳಲ್ಲಿ 23ರನ್​​ಗಳಿಕೆ ಔಟಾದರು.ತದನಂತರ ಬಂದ ಪಡಿಕ್ಕಲ್​ 9ರನ್​ಗಳಿಸಿ ಹ್ಯಾಜಲ್​ವುಡ್ ಓವರ್​ನಲ್ಲಿ ಔಟಾದರು.
ಮಹತ್ವದ ಪಂದ್ಯದಲ್ಲಿ ಆರ್​ಸಿಬಿ ನೀಡಿದ್ದ 158ರನ್​ಗಳ ಟಾರ್ಗೆಟ್ ಬೆನ್ನತ್ತಿದ ರಾಜಸ್ಥಾನ ಪರ ಆರಂಭಿಕರಾಗಿ ಕಣಕ್ಕಿಳಿದ ಬಟ್ಲರ್ ಮತ್ತೊಮ್ಮೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆರಂಭದಿಂದಲೂ ಅಬ್ಬರಿಸಿದ ಈ ಪ್ಲೇಯರ್​ ತಾವು ಎದುರಿಸಿದ 60 ಎಸೆತಗಳಲ್ಲಿ ಅಜೇಯ 106ರನ್​ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಕೊನೆಯದಾಗಿ ತಂಡ 18. 1 ಓವರ್​ಗಳಲ್ಲಿ 3 ವಿಕೆಟ್​ನಷ್ಟಕ್ಕೆ 161ರನ್​ಗಳಿಕೆ ಮಾಡಿ, ಫೈನಲ್​ಗೆ ಲಗ್ಗೆ ಹಾಕಿದ್ದು, ಭಾನುವಾರ ಗುಜರಾತ್ ತಂಡದ ವಿರುದ್ಧ ಸೆಣಸಾಟ ನಡೆಸಲಿದೆ.ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ-ಬೆಂಗಳೂರು ಮುಖಾಮುಖಿಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ-ಬೆಂಗಳೂರು ಮುಖಾಮುಖಿಆರ್​ಸಿಬಿ ಪರ ಹ್ಯಾಜಲ್​ವುಡ್​ 2 ವಿಕೆಟ್​, ಹಸರಂಗ 1 ವಿಕೆಟ್ ಪಡೆದರೆ, ಉಳಿದಂತೆ ಸಿರಾಜ್​, ಹರ್ಷಲ್ ಪಟೇಲ್ ಹಾಗೂ ಮ್ಯಾಕ್ಸವೆಲ್ ಗಮನಾರ್ಹ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಲಿಲ್ಲ.


Spread the love

About Karnataka Junction

    Check Also

    ನಿಮ್ಮ ಮಕ್ಕಳ ಆರೋಗ್ಯ ರಕ್ಷಣೆ ನಮ್ಮ ಕಾಳಜಿ

    Spread the loveಧಾರವಾಡ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯವಾರ್ಡ ಸಂಖ್ಯೆ 3ರಲ್ಲಿನ ಕಮಲಾಪುರದ 4ನಂಬರ ಸರ್ಕಾರಿ ಶಾಲೆ ಹಾಗು ಗುಲಗಂಜಿಕೊಪ್ಪದ …

    Leave a Reply

    error: Content is protected !!