ಮಹಾರಾಷ್ಟ್ರ; ಮುಂಬೈನ ಕ್ರೂಸ್ ಶಿಪ್ ಡ್ರಗ್ಸ್ ಪ್ರಕರಣ ಎದುರಿಸುತ್ತಿದ್ದ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಪುತ್ರ ಆರ್ಯನ್ಗೆ ಬಿಗ್ ರಿಲೀಫ್ ಸಿಕ್ಕಿದೆ.
ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ ಶುಕ್ರವಾರ ಎನ್ಡಿಪಿಎಸ್ ನ್ಯಾಯಾಲಯದಲ್ಲಿ ಆರ್ಯನ್ ಖಾನ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಆರ್ಯನ್ ಖಾನ್ ಹೆಸರನ್ನು ಕೈಬಿಟ್ಟಿದೆ. ಈ ಮೂಲಕ ಆರ್ಯನ್ಗೆ ಕೋರ್ಟ್ನಿಂದ ಕ್ಲೀನ್ ಚಿಟ್ ಸಿಕ್ಕಂತಾಗಿದೆ.ಪ್ರಕರಣದಲ್ಲಿ ಮುನ್ಮುನ್ ಧಮೇಚಾ ಮತ್ತು ಅರ್ಬಾಜ್ ಮರ್ಚೆಂಟ್ ಎನ್ನುವವರ ಹೆಸರು ಇದ್ದು ಆರ್ಯನ್ ಖಾನ್ ಸೇರಿದಂದತೆ ಒಟ್ಟು 6 ಜನರ ಹೆಸರನ್ನು ತೆಗೆದು ಹಾಕಿದೆ. 6 ಜನರ ವಿರುದ್ಧ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಸಾಕ್ಷ್ಯಾಧಾರ ಪತ್ತೆಯಾಗದ ಹಿನ್ನೆಲೆ ಆರ್ಯನ್ ಖಾನ್ ಜೊತೆ ಸಾಹು, ಆನಂದ್, ಸುನಿಲ್ ಸೆಹ್, ಅರೋರಾ ಸೇರಿದ್ದಾರೆ.
ಅಕ್ಟೋಬರ್ 2 ರಂದು, ಕ್ರೂಸ್ ಮೇಲೆ ಎಎಸ್ಸಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು. ಇದರಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನ ಬಂದನ ಮಾಡಲಾಗಿತ್ತು.
Check Also
ಸಂಸ್ಕಾರ ಶಾಲೆಯ ಯುಕೆಜಿ ಮಕ್ಕಳ ಬಿಳ್ಕೋಡುಗೆ ಸಮಾರಂಭ
Spread the loveಹುಬ್ಬಳ್ಳಿ: ನಗರದ ಸಂಸ್ಕಾರ ಇಂಗ್ಲಿಷ್ ಮಿಡಿಯಂ ಶಾಲೆಯ ಯುಕೆಜಿ ಮಕ್ಕಳಿಗೆ ಬೀಳ್ಕೋಡುವ ಸಮಾರಂಭ ಇಂದು ಜರುಗಿತು. ಇದೇ …