ಭೋಪಾಲ್: ತಲೆ ಮರೆಸಿಕೊಂಡಿದ್ದ ವಂಚಕಿಯೊಬ್ಬಳನ್ನು ಬಂಧನ ಮಾಡುವಲ್ಲಿ ಭೋಪಾಲ್ ಪೊಲೀಸರು ಯಶಸ್ವಿಯಾಗಿದ್ದಾರೆ. ಮಹಿಳೆ ಈಗಾಗಲೇ ಇಬ್ಬರು ಮಕ್ಕಳ ತಾಯಿಯಾಗಿದ್ದು, ಬೇರೆ ಬೇರೆ ಹೆಸರಿಟ್ಟುಕೊಂಡು ಮದುವೆ ಮಾಡಿಕೊಳ್ಳುವ ಮೂಲಕ ಬರೋಬ್ಬರಿ 15 ಮಂದಿಗೆ ವಂಚನೆ ಮಾಡಿದ್ದಾಳೆ. ಮದುವೆ ಮಾಡಿಕೊಂಡು ಹನಿಮೂನ್ ಹೆಸರಿನಲ್ಲಿ ಅವರಿಗೆಲ್ಲ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಮಹಿಳೆ ಪೂಜಾ, ರಿಯಾ, ರೀನಾ,ಸುಲ್ತಾನಾ ಎಂಬ ಹೆಸರಿನಲ್ಲಿ ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 15 ಮದುವೆ ಮಾಡಿಕೊಂಡಿದ್ದು, ಬೇರೆ ಬೇರೆ ಸ್ಥಳಗಳಲ್ಲಿ ವಾಸ ಮಾಡುವ ಮೂಲಕ ಪೊಲೀಸರ ದಾರಿ ತಪ್ಪಿಸುವ ಕೆಲಸ ಸಹ ಮಾಡಿದ್ದಾಳೆ. ಉಜ್ಜೈನಿ, ಜಬಲ್ಪುರ್, ನರ್ಮದಾಪುರಂ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಯುವತಿ ವಿರುದ್ಧ ವಂಚನೆಯ ದೂರು ದಾಖಲಾಗಿವೆ.ವಂಚನೆ ಮಾಡಿರುವ ಮಹಿಳೆಯನ್ನ ಬುಧ್ವಾರದ ಸೀಮಾ(32) ಎಂದು ಗುರುತಿಸಲಾಗಿದೆ. ಈ ಮಹಿಳೆಯನ್ನ ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಇದೀಗ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಮಹಿಳೆ ವಿಚಾರಣೆ ನಡೆಸಲಾಗಿದ್ದು, ಕಳೆದ ಎರಡು ವರ್ಷಗಳಲ್ಲಿ ಬರೋಬ್ಬರಿ 15 ಯುವಕರೊಂದಿಗೆ ಮದುವೆ ಮಾಡಿಕೊಂಡು, ಅವರಿಗೆ ಮೋಸ ಮಾಡಿರುವುದಾಗಿ ಹೇಳಿಕೊಂಡಿದ್ದಾಳೆ.
ಎರಡು ವರ್ಷಗಳ ಹಿಂದೆ ಸೀಮಾ ವಿರುದ್ಧ ಕಾಂತಪ್ರಸಾದ್ ಎಂಬುವವರು ದೂರು ದಾಖಲು ಮಾಡಿದ್ದರು. ಅಂದಿನಿಂದಲೂ ಯುವತಿಗೋಸ್ಕರ ಪೊಲೀಸರು ಹುಡುಕಾಟ ನಡೆಸಿದ್ದರು. ಇದೀಗ ಅದರಲ್ಲಿ ಸಫಲರಾಗಿದ್ದಾರೆ. ಮದುವೆ ಮಾಡಿಕೊಳ್ಳುವ ನೆಪದಲ್ಲಿ ಮೋಸ ಮಾಡಿರುವ ಮಹಿಳೆ ಲಕ್ಷಗಟ್ಟಲೆ ಹಣ ಲಪಟಾಯಿಸಿದ್ದಾಳೆ.ಮದುವೆಯಾದ ಬಳಿಕ ಹನಿಮೂನ್ ಅಥವಾ ಮನೆಯಲ್ಲಿ ಯಾರಿಗಾದ್ರೂ ಅನಾರೋಗ್ಯ ಎಂದು ಹೇಳಿ ಹಣ ಪಡೆದುಕೊಂಡು ಪರಾರಿಯಾಗುತ್ತಿದ್ದಳೆಂದು ಡಿಸಿಪಿ ಶೈಲೆಂದ್ರ ತಿಳಿಸಿದ್ದಾರೆ. ಪ್ರಮುಖವಾಗಿ ಕೋವಿಡ್ ಸಂದರ್ಭದಲ್ಲಿ ಅನೇಕ ಹಳ್ಳಿಗಳಲ್ಲಿ ಮದುವೆ ಹೆಸರಿನಲ್ಲಿ ಜನರನ್ನ ಬಲೆಗೆ ಬೀಳಿಸಿ ಮದುವೆಯ ನೆಪದಲ್ಲಿ ಮೋಸ ಮಾಡಿದ್ದಾಳೆ.
Check Also
ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ
Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …