ಮೈಸೂರು : ಬಿಜೆಪಿಯವರಿಗೆ ಮಕ್ಕಳು ಹುಟ್ಟಿಸುವ ಶಕ್ತಿ ಇಲ್ಲಾ. ನಾವು ಹುಟ್ಟಿಸಿದ ಮಕ್ಕಳನ್ನ ನಮ್ಮ ಮಕ್ಕಳು ಎನ್ನುತ್ತಾರೆ. ನೀವು ಗಂಡಸರಾ ಮುಂಡೆವಾ? ನಮ್ಮಲ್ಲಿರುವ ಹುಡುಗರನ್ನ ಕರೆದುಕೊಂಡು ಕಾಂಗ್ರೆಸ್ನವರು ಹೋದ್ರು. ಸ್ವಂತ ಶಕ್ತಿಯಿಂದ ಕೆಲಸ ಮಾಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮೈಸೂರಿನಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ರಾಜಾಹುಲಿಗೆ ಮಗನಿಗೆ ಒಂದು ಸೀಟು ಕೊಡಿಸಲು ಆಗಲಿಲ್ಲ. ಯಡಿಯೂರಪ್ಪನವರಿಗೆ ಇದಕ್ಕಿಂತ ಅವಮಾನ ಇನ್ನೇನು ಬೇಕು. ಯಡಿಯೂರಪ್ಪ ಬಿಜೆಪಿಯನ್ನ ಕಟ್ಟಿದ್ದವರು. ಬಿ.ಎಲ್. ಸಂತೋಷ್ ಅವರನ್ನು ಅಭಿನಂಧಿಸುತ್ತೇನೆ. ಅವರು ಆರ್ಎಸ್ಎಸ್ನವರೇ ಇರಬಹುದು. ಹುಡುಕಿ ಹುಡುಕಿ ಕಾರ್ಯಕರ್ತರಿಗೆ ಅಧಿಕಾರ ನೀಡುತ್ತಿದ್ದಾರೆ. ದುಡಿದವರಿಗೆ ಮಣೆ ಹಾಕುತ್ತಿಲ್ಲ. ಅದು ಕೇಶವ ಕೃಪಾ, ನಮ್ಮದು ಬಸವ ಕೃಪಾ ಅದೇ ನಮಗೂ ಅವರಿಗೆ ಇರುವ ವ್ಯತ್ಯಾಸ ಎಂದು ಸಿ.ಎಂ. ಇಬ್ರಾಹಿಂ ಹೇಳಿದರು.