ಧಾರವಾಡ; ಕಾಂಗ್ರೆಸ್ ಪಕ್ಷ ಬೌದ್ದಿಕ ದಿವಾಳಿ ಕೋರ ವಾಗಿದ್ದು ಈಗ
ಅಸಹಿಷ್ಣತೆಯ ಬಗ್ಗೆ ಮಾತನಾಡುತ್ತಾರೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಕೇಂದ್ರ ಗಣಿ ಕಲ್ಲಿದ್ದಲು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು
ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ ಎರಡು ಬಾರಿ ಚುಣಾಯಿತ ಪ್ರಧಾನಿಯ ಬಗ್ಗೆ ಮಾತನಾಡುತ್ತಾರೆ.
ಪಠ್ಯಪುಸ್ತಕ ದಲ್ಲಿ ಸಂಘದ ಸಂಸ್ಥಾಪಕರ ಹೇಸರು ಸೇರಿಸಿದಕ್ಕೆ ದೊಡ್ಡ ಪ್ರಮಾಣದಲ್ಲಿ ವಿವಾದ ಮಾಡುತ್ತಿದ್ದಾರೆ. ಆದರೆ ಈ ಕುರಿತು ಪರಾಮರ್ಶೆ ಮಾಡಿ ಮಾತನಾಡಬೇಕು.
ನಿಮ್ಮ ಕಾಲದಲ್ಲಿ ಪಠ್ಯಪುಸ್ತಕ ಹೇಗೆ ಇತ್ತು ಇವಾಗ ಹೇಗೆ ಇದೆ ಎಂಬುದನ್ನು ದಯವಿಟ್ಟು ನೋಡಬೇಕು. ಸುಳ್ಳು ಹೇಳುವುದರಲ್ಲಿ ಕಾಂಗ್ರೆಸ್ ಮತ್ತು ಎಡಪಂತಿಯರು ನಿಸ್ಸಿಮರು ಎಂದು ಕಿಡಿಕಾರಿದರು.
ನಾರಾಯಣಗುರು ಪಾಠವನ್ನ ತೆಗೆದಿಲ್ಲ ಇವರು ಯಾವುದು ಹೇಳ್ತಾರೆ ಯಾವುದನ್ನ ತೆಗೆದಿಲ್ಲ ಬರೀ ಹಸಿ ಸುಳ್ಳು ಹೇಳುತ್ತಾರೆ.
ಸಿದ್ದರಾಮಯ್ಯ ಆ್ಯಂಡ ಕಂಪನಿಗೆ ನಿಮ್ಮ ನೇತಾರ ರಾಹುಲ್ ಗಾಂಧಿಯ ಮುಂದೆ ಕೈ ಕಟ್ಡಿ ನಿಲ್ಲುತ್ತಿರಿ, ಸಿಸೋ ಎಂದು ರಾಹುಲ್ ಗಾಂದಿಯ ಮುಂದೆ ಕೈ ಕಟ್ಟಿ ನಿಲ್ಲುತ್ತಿರಲ್ಲ ನಿಮಗೆ ಯಾವ ನೈತಿಕತೆ ಇದೆ.
ನಾನು ನಿಮಗೆ ನೇರವಾಗಿ ಪ್ರಶ್ನೆ ಮಾಡುತ್ತೆನೆ ಇದಕ್ಕೆ ನಿಮ್ಮಿಂದ ಉತ್ತರ ಬರಲಿ ಎಂದರು.
5 8 ವರ್ಷಗಳ ಕಾಲ ಅಧಿಕಾರದಲ್ಲಿದ್ರಿ, ನೀವು ಭಗತ್ ಸಿಂಗ್, ಸುಭಾಷ್ ಚಂದ್ರ, ಅವರ ಹೇಸರು ಎಷ್ಟು ಯೋಜನೆಗೆ ಇಟ್ಟಿದ್ಸಿರಿ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ನೀಡಿ ಎಂದರು.
*ದೇಹಲಿ ವೊಂದರಲ್ಲಿ ಇಂದಿರಾ ಗಾಂದಿ ನೆಹರೂ , ರಾಜೀವ್ ಗಾಂದಿ ಹೇಸರಿನಲ್ಲಿ 298 ಯೋಜನೆಗಳಿಗೆ ಹೆಸರು ಇಟ್ಟಿಟ್ಟಿರಿ* ..?
ನಿಮಗೆ ಒಂದು ದಿನಾನೂ ಸುಬಾಷ ಚಂದ್ರ , ನಾರಾಯನ ಗುರು, ಬಾಲಗಂಗಾಧರ ತಿಲಕ್ ಹೆಸರು ನೆನಪಾಗಲಿಲ್ಲ ಯಾಕೆ ಎಂದು ಪ್ರಶ್ನೆ ಮಾಡಿದ ಸಚಿವ ಪ್ರಲ್ಹಾದ್ ಜೋಶಿ ಅವರು,ಇವತ್ತು ಬಾಳ್ ದೊಡ್ಡ ದೊಡ್ಡದಾಗಿ ಮಾತನಾಡುತ್ತಾರೆ
ಸರ್ದಾರ ವಲ್ಲೆಬಾಯಿ ಪಟೇಲ್ ಅವರು ನೆಹರು ಸರಕಾರದಲ್ಲಿ ಉಪ ಮುಖ್ಯ ಮಂತ್ರಿಯಾಗಿದ್ರು ಡಾ.
ಬಾಬಾಸಾಹೇಬ್ ಅಂಬೇಡ್ಕರ ಅವರಿಗೆ ಭಾರತ ರತ್ನ ಕೊಡಲಿಕ್ಕೆ ಎಷ್ಟು ದಿವಸ ಮಾಡಿದ್ರು ಅದು ನಿಮಗೆ ಗೊತ್ತಿಲ್ವಾ.
ಬಿಜೆಪಿ ಒತ್ತಡದ ಮೇಲೆ ವಿಪಿ ಸಿಂಗ್ ಸರಕಾರ ಇದ್ದಾಗ ಭಾರತ ರತ್ನಕೊಟ್ಟಿದ್ದಾರೆ ಈ ವಿಷಯಗಳ ಕುರಿತು ತಿಳಿದುಕೊಳ್ಳಿ,
ಸಿದ್ದರಾಮಯ್ಯ ಅವರೆ ಆಷಾಡ ಭೂತತೆಯನ್ನ ಬಿಡಬೇಕು
ನಿಮ್ಮನ್ನ ಅವರು ಎರಡನೇಯ ಸಾರಿ ಸಿಎಂ ಮಾಡಲ್ಲ, ನಿಮ್ಮ ಪಾರ್ಟಿ ಅಧಿಕಾರಕ್ಕೆ ಬರಲ್ಲ ಎಂದರು.
*ಡಿಕೆ ಮತ್ತು ಸಿದ್ದರಾಮಯ್ಯಾ ನಡುವೆ ಗುದ್ದಾಟದಿಂದ ಪಕ್ಷ ಹಾಳು*
ಡಿ.ಕೆ. ಶಿವಕುಮಾರ್
ಮತ್ತು ನಿಮ್ಮ ನಡುವೆ ( ಸಿದ್ದರಾಮಯ್ಯಾ ) ನಿಮ್ಮ ಪಕ್ಷ ಹಾಳಾಗಿ ಹೋಗುತ್ತದೆ
ಕಾಂಗ್ರೆಸ್ ಪಕ್ಷದ ವಿರುದ್ದ ಬಾಷಣದೂದ್ದಕ್ಕೂ ಹರಿಹಾಯ್ದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೊದಲು ನಿಮ್ಮಲ್ಲಿಯ ದೋಷಗಳನ್ನು ಸರಿಪಡಿಸಿಕೊಳ್ಳಿ ಎಂದರು.
Check Also
ಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ
Spread the loveಬಹುದೊಡ್ಡ ಪ್ರಮಾಣದಲ್ಲಿ ರಾಜ್ಯ ರಾಜಕಾರಣದಲ್ಲಿ ಬದಲಾವಣೆಯಾಗುತ್ತೆ- ಟೆಂಗಿನಕಾಯಿ ಹುಬ್ಬಳ್ಳಿ: ಈ ಸಲ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ …