https://youtu.be/W-LS6KFHcu0
ಹುಬ್ಬಳ್ಳಿ ; ಹಳೇ ಹುಬ್ಬಳ್ಳಿ ಚೆನ್ನ ಪೇಟೆಯ ಪಾಂಡುರಂಗ ಕಾಲೋನಿಯ ಲಕ್ಷ್ಮಣಸಾ ಇರಕಲ್ ಎಂಬುವವರ ಮನೆಯಲ್ಲಿ ಜೂಜಾಟದಲ್ಲಿ ತೊಡಗಿದ್ದ 14 ಆರೋಪಿಗಳನ್ನ ಬಂಧಿಸಿ, ಅವರಿಂದ 73, 720 ನಗದು ಸೇರಿದಂತೆ ಒಟ್ಟು 1.35,720 ರೂಪಾಯಿ ಮೌಲ್ಯದ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳಾದ ರಾಕೇಶ ಮೇಘರಾಜ್, ಸುನೀಲ ನಾಕೋಡ್, ಆನಂದ ಧರ್ಮದಾಸ, ಸಚಿನ್ ಒತಾರಿ,ವೀರಶ ಬಸವಾ, ರವಿ ಧರ್ಮದಾಸ, ಕಿರಣ ಧಲಬಂಜನ್, ತುಳಜಪ್ಪ ಸೇರಿದಂತೆ 14 ಜನರ ಜೊತೆಗೆ ಮನೆಯನ್ನೇ ಜೂಜಾಟ್ ಅಡ್ಡೆಯನ್ನಾಗಿಸಿದರು. ಖಚಿತವಾದ ಮಾಹಿತಿ ಅಧರಿಸಿ ಕಸಬಾಪೇಟೆಯ ಪೊಲೀಸರು ದಾಳಿ ಮಾಡಿ ₹ 73.720, ಹಾಗೂ ₹62.000 ಮೌಲ್ಯದ ವಿವಿಧ ಕಂಪನಿಯ ಮೊಬೈಲ್ ವಶಪಡಿಸಿಕೊಳ್ಳಾಗಿದೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್, ಉಪ ಆಯುಕ್ತರಾದ ರಾಮರಾಜನ್ ಮಾರ್ಗದರ್ಶನದಲ್ಲಿ ಕಸಬಾಪೇಟೆಯ ಪೊಲೀಸ್ ಸಿಬ್ಬಂದಿ ದಾಳಿ ಮಾಡಿ ಮಾಡಿದ್ದರು. ಈ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.