ಚಿಕ್ಕಮಗಳೂರು : ತಾಲೂಕಿನ ಹಾಗಲಖಾನ್ ಕಾಫಿ ತೋಟದಲ್ಲಿ ರ್ದುಘಟನೆಯೊಂದು ನಡೆದು ಹೋಗಿದೆ. ಕಿರಿಯ ಮಗನ ಹುಚ್ಚಾಟಕ್ಕೆ ತಾಯಿಯೋರ್ವಳು ಇಹಲೋಕ ತ್ಯಜಿಸಿದ್ದಾರೆ. ಇಮ್ತಿಯಾಜ್ ಮತ್ತು ಮೈಮುನಾ ಇಬ್ಬರು ಮಕ್ಕಳೊಂದಿಗೆ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಬಡಪಾಯಿ ಕುಟುಂಬ. ಇಬ್ಬರು ಮಕ್ಕಳಲ್ಲಿ ಕಿರಿಯವನ ಹುಚ್ಚಾಟದಿಂದ ಇಂದು ಇಹಲೋಹ ತ್ಯಜಿಸುವಂತಾಗಿದೆ. ಕಾಫಿತೋಟದ ಲೈನ್ ಮನೆಯೊಂದರಲ್ಲಿ ಕಷ್ಟದಲ್ಲೇ ವಾಸ ಮಾಡುತ್ತಿದ್ದ ಇವರಿಗೆ ಈ ಕಿರಿ ಮಗ ಪಬ್ ಜೀ ಆಟದ ಹುಚ್ಚಾಟ ಅವನ ತಾಯಿಯನ್ನೇ ಬಲಿ ತೆಗೆದುಕೊಂಡಿದೆ.
ಮನೆಯಲ್ಲಿ ಎಲ್ಲರೂ ದುಡಿತ್ತಿದ್ರೂ ಈ ಶೋಕಿಲಾಲ ಮಾತ್ರ ಶಾಲೆಗೂ ಹೋಗದೇ ಯಾವಾಗಲೂ ಪಬ್ಜಿ-ಪಬ್ಜಿ ಅಂತಾ ಪಬ್ಜಿ ಆಟದ ಘೀಳಿಗೆ ಬಿದ್ದಿದ್ದ. ಯಾವಾಗಲೂ ಮೊಬೈಲ್ ಇಟ್ಕೊಂಡು ಪಬ್ಜಿ ಆಟದಲ್ಲೇ ತಲ್ಲೀನವಾಗುತ್ತಿದ್ದ. ಮಗನಿಗೆ ತಂದೆ ಇಮ್ತಿಯಾಜ್ ಬಿಟ್ಬಿಡೋ. ಇದರಿಂದ ನೀನು ಹಾಳಾಗಾದಲ್ದೇ, ನಮ್ಮ ಮನಸ್ಸನ್ನೂ ಹಾಳು ಮಾಡ್ತೀಯಾ ಅಂತಾ ಅನೇಕ ಬಾರಿ ಬುದ್ದಿವಾದ ಹೇಳಿದ್ದ. ಆದ್ರೆ ಅಪ್ಪನ ಮಾತನ್ನ ಕಿವಿಗೆ ಹಾಕಿಕೊಳ್ಳದ ಈ ಪುಡಾರಿ, ನಿನ್ನೆ ಕೂಡ ತಂದೆ ಕೆಲಸದಿಂದ ಬಂದಾಗ ಪಬ್ಜಿ ಆಟ ಆಡುತ್ತಿದ್ದ. ಇದನ್ನ ನೋಡಿದ ತಂದೆ ಮೊಬೈಲ್ ತೆಗೆದಿಡು ಅಂತಾ ಗದರಿದ್ದಾನೆ.
ನಾನು ನನ್ನ ಮೊಬೈಲ್ನಲ್ಲಿ ಆಟ ಆಡ್ತಿದ್ದೇನೆ ನಿಂಗೇನು ಕಷ್ಟ ಅಂತಾ ತಂದೆಗೆ ಎದುರುತ್ತರ ನೀಡಿದ್ದಾನೆ ಈ ಪಾಪಿ ಮಗ. ಸ್ವಲ್ಪ ಎಣ್ಣೆ ಏರಿಸಿಕೊಂಡು ಬಂದಿದ್ದ ಇಮ್ತಿಯಾಜ್ ಮಗನ ಮಾತಿನಿಂದ ಕೋಪಕೊಂಡು ಮನೆಯಲ್ಲಿ ಮಂಗಗಳನ್ನು ಹೆದರಿಸಲು ಇಟ್ಟಿದ್ದ ಸಿಂಗಲ್ ಬ್ಯಾರೆಲ್ ಕೋವಿಯನ್ನ ತೆಗೆದುಕೊಂಡಿದ್ದಾನೆ. ಅಯ್ಯೋ. ಹೊಡೆಯಬೇಡಿ, ಅಂತಾ ತಾಯಿ ಮೈಮುನಾ ಮಗನನ್ನ ಕಾಪಾಡಲು ಬಂದಿದ್ದಾಳೆ, ಅಷ್ಟೇ,, ಮಗನಿಗೆ ತಗುಲಬೇಕಿದ್ದ ಗುಂಡು ಅಮ್ಮನ ಎದೆಯನ್ನ ಸೀಳಿದೆ.