ಕಾಶ್ಮೀರ: ಜಮ್ಮು- ಕಾಶ್ಮೀರದಲ್ಲಿ ಟಿಕ್ಟಾಕ್ ಸ್ಟಾರ್ ಮಹಿಳೆಯನ್ನು ಗುಂಡಿಟ್ಟು ಕೊಲೆ ಮಾಡಲಾಗಿದೆ. ಬದ್ಗಾಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೃತ ಮಹಿಳಾ ಕಲಾವಿದೆಯನ್ನು ಅಮ್ರೀನ್ ಭಟ್ ಎಂದು ಗುರುತಿಸಲಾಗಿದೆ. ಮನೆಯ ಬಳಿಯೇ ಉಗ್ರರು ಅವರ ಮೇಲೆ ರಾತ್ರಿ 8 ಗಂಟೆಗೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಅವರ ಸಹೋದರ ಸಂಬಂಧಿ ಫರಾನ್ ಝಬೈರ್ ಕೂಡಾ ಗಾಯೊಂಡಿದ್ದಾರೆ.
ಅಮ್ರೀನ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುದರೊಳಗೆ ಆಕೆ ಮೃತಪಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದ ಅಮ್ರೀನ್ ಭಟ್ ಗಾಯನ, ಕಿರುಚಿತ್ರದ ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದರು. ಗುಂಡಿನ ದಾಳಿಯ ಬಳಿಕ ಆ ಪ್ರದೇಶಕ್ಕೆ ಬಿಗಿ ಭದ್ರತೆ ನೀಡಲಾಗಿದೆ.
Check Also
ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ
Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …