ತುಮಕೂರು: ಜೆಸಿಬಿ ಕಂಪನಿಯೊಂದು ಕಳಪೆ ಗುಣಮಟ್ಟದ ಜೆಸಿಬಿ ನೀಡಿ ರೈತರಿಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಹೆಬ್ಬೂರು ಸುತ್ತಮುತ್ತಲಿನ ರೈತರು ಲೋನ್ ಮಾಡಿ ಬೆಂಗಳೂರಿನ ಮಾಕಳಿ ಬಳಿಯಿರುವ ಕಂಪನಿಯಿಂದ 35 ಲಕ್ಷಕ್ಕೂ ಹೆಚ್ಚು ಮೌಲ್ಯದ 20 ಜೆಸಿಬಿಗಳನ್ನು ಖರೀದಿ ಮಾಡಿದ್ದರು. ಹೊಸ ಜೆಸಿಬಿಯಿಂದ ದಿನಕ್ಕೆ 10 ರಿಂದ 15ಸಾವಿರ ಹಣ ಸಂಪಾದನೆ ಮಾಡುವ ಕನಸು ಕಂಡಿದ್ದರು. ಆದರೆ ಹೊಸ ಜೆಸಿಬಿ ಖರೀದಿಸಿದ ಆರೇ ತಿಂಗಳಿಗೆ ಕೆಟ್ಟು ನಿಂತಿವೆ. ಈ ಬಗ್ಗೆ ಜೆಸಿಬಿ ಕಂಪನಿಯವರಿಗೆ ದೂರು ಕೊಟ್ಟರೂ ಯಾವುದೇ ಉಪಯೋಗ ಇಲ್ಲದಂತಾಗಿದೆ.
ಎರಡು ಮೂರು ಬಾರಿ ಕಂಪನಿ ಕಡೆಯಿಂದ ಸರ್ವೀಸ್ ಮಾಡಿಕೊಡುವುದಾಗಿ ಹೇಳಿದ್ದ ಕಂಪನಿ ಒಮ್ಮೆ ಜೆಸಿಬಿ ರೆಡಿ ಮಾಡಲು 70 ರಿಂದ 80 ಸಾವಿರಕ್ಕೂ ಹೆಚ್ಚಿನ ಬಿಲ್ ಪಾವತಿಸುವಂತೆ ರೈತರ ಮೇಲೆ ಹೊರೆ ಹೇರಿದೆ. ಇದೇ ರೀತಿ ಆರು ತಿಂಗಳಲ್ಲಿ 4 ರಿಂದ 5 ಬಾರಿ ಸರ್ವೀಸ್ ಬಿಲ್ ಹಾಕಿರುವ ಆರೋಪ ಕೇಳಿಬಂದಿದೆ.