Breaking News

ಅನ್ನದಾತನ ಮಗಳ ಮುಡಿಗೆ 16 ಚಿನ್ನದ ಪದಕ

Spread the love

ಬಾಗಲಕೋಟೆ : ತೋಟಗಾರಿಕೆ ವಿವಿಯಲ್ಲಿ ಬುಧವಾರ ನಡೆದ 11ನೇ ಘಟಿಕೋತ್ಸವದಲ್ಲಿ ಕಾಫಿ ತೋಟದ ರೈತನ ಮಗಳಾದ ಉಮ್ಮೆಸಾರಾಳಿಗೆ 16 ಚಿನ್ನದ ಪದಕಗಳು ಲಭಿಸಿದ್ದು, ರಾಜ್ಯದ ರಾಜ್ಯಪಾಲರು ಹಾಗೂ ತೋವಿವಿಯ ಕುಲಾಧಿಪತಿಗಳಾದ ಥಾವರ್‍ಚಂದ್ ಗೆಹ್ಲೋಟ್ ಅವರು ಚಿನ್ನದ ಪದಕಗಳನ್ನು ಪ್ರಧಾನ ಮಾಡಿದರು. ಉಮ್ಮೆಸಾರಾ ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಗುಲ್ಲಂಪೆಟೆಯವರಾಗಿದ್ದು, ತಾಯಿ ರಹಿನಾಬಾನು ಗೃಹಿಣಿಯಾಗಿದ್ದು, ತಂದೆ ಅಸ್ನತ್ ಆಲಿ ಕೃಷಿ ವೃತ್ತಿಯಲ್ಲಿ ತೊಡಗಿದ್ದು, ಕಾಫಿ ತೋಟ ಹೊಂದಿರುತ್ತಾರೆ. ಉಮ್ಮೆಸಾರಾಳು ಶಿಕ್ಷಣದಲ್ಲಿ ಒಂದನೇ, ಎರಡನೇ ಹಾಗೂ ಮೂರನೇ ಸಾಲಿನಲ್ಲಿ ಯೂನಿವರ್ಸಿಟಿ ಮೆರಿಟ್ ವಿದ್ಯಾರ್ಥಿ ವೇತನ ಪಡೆದಿಕೊಂಡಿದ್ದು, ತನ್ನ ಪ್ರತಿಯೊಂದು ತರಗತಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಂಡಿರುತ್ತಾರೆ.

ಘಟಿಕೋತ್ಸವದಲ್ಲಿ ಒಟ್ಟಾರೆಯಾಗಿ ಡಾಕ್ಟರೇಟ್ ಪದವಿಯಲ್ಲಿ 4, ಸ್ನಾತಕೋತ್ತರ ಪದವಿಯಲ್ಲಿ 12 ಹಾಗೂ ಸ್ನಾತಕ ಪದವಿಯಲ್ಲಿ 18 ಸೇರಿ ಒಟ್ಟು 34 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯಿತು. 4 ಪದಕಗಳನ್ನು ಕೊಡಗು ಜಿಲ್ಲೆಯ ಮಡಿಕೇರಿಯ ಸುಹಾನ್ ಭೀಮಯ್ಯ ಬಿ, ಬಂಗಾರಪೇಟೆಯ ಮಹೇಶ ವಿ.ಎನ್ ಅವರು ಪಡೆದುಕೊಂಡಿದ್ದಾರೆ. ಅದೇ ರೀತಿ ಮೂರು ಚಿನ್ನದ ಪದಕಗಳನ್ನು ಚಂದನ ಎನ್, ಅರುಣ ಕುಂಬಾರ್, ಪಡೆದುಕೊಂಡಿರುತ್ತಾರೆ. ಉಳಿದವರು ಎರಡು ಹಾಗೂ ಒಂದು ಚಿನ್ನದ ಪದಕಗಳನ್ನು ಪ್ರಧಾನ ಮಾಡಲಾಯಿತು.

ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗುವೆ
—————————————————————
ವೈಜ್ಞಾನಿಕ ಸಂಶೋಧನೆಯಲ್ಲಿ ಮುಂದುವರೆಯುವ ಮೂಲಕ ರೈತ ಸಮುದಾಯಕ್ಕೆ ಏನಾದರೂ ಸಹಾಯ ಮಾಡುವ ಉದ್ದೇಶ ಹೊಂದಿರುವುದಾಗಿ ಸ್ನಾತಕ ಪದವಿಯಲ್ಲಿ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ಉಮ್ಮೆಸಾರಾ ತಿಳಿಸಿದರು. ತಂದೆ ತಾಯಿಯ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯವಾಯಿತು. ನಮ್ಮ ತಂದೆಯವರು ಮೂಲತಃ ರೈತರಾಗಿದ್ದು, ರೈತ ಸಮುದಾಯಕ್ಕೆ ಏನಾದರೂ ಸಹಾಯ ಮಾಡುವ ಉದ್ದೇಶ ಹೊಂದಲಾಗಿದೆ ಎಂದರು.

ಚಿನ್ನದ ಪದಕ ಪಡೆದ ಉಮ್ಮೆಸಾರಾಳ ತಂದೆಯವರಾದ ಹಶ್ಮತ್ ಆಲಿ ಮಾತನಾಡಿ ತನ್ನ ಸತತ ಪರಿಶ್ರಮದಿಂದ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಯಿತು. ಮಗಳ ಸಾಧನೆ ಕಂಡು ಸಂತೋಷವಾಗಿದೆ. ಅವಳ ಮುಂದಿನ ಪ್ರಯತ್ನಕ್ಕೂ ಸಹ ಪ್ರೋತ್ಸಾಹ ನೀಡುವುದಾಗಿ ತಿಳಿಸಿದ ಅವರು ಪ್ರತಿಯೊಬ್ಬರು ಕೃಷಿ ಕಾಯಕದಲ್ಲಿ ತೊಡಗಬೇಕು ಎಂದರು.


Spread the love

About Karnataka Junction

[ajax_load_more]

Check Also

ವಿದ್ಯಾಮಂತ್ರಿಗೆ ಕನ್ನಡ ಬರಲ್ಲ” ಎಂದಿರುವ ವಿದ್ಯಾರ್ಥಿ ಮೇಲೆ ಇಂಗ್ಲೀಷ್ ನಲ್ಲೇ ಕ್ರಮಕ್ಕೆ ಸೂಚನೆ ಅಕ್ಷಮ್ಯ

Spread the loveಹುಬ್ಬಳ್ಳಿ: ‘ವಿದ್ಯಾಮಂತ್ರಿಗೆ ಕನ್ನಡ ಬರಲ್ಲ’ ಎಂದ ವಿದ್ಯಾರ್ಥಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶಿಕ್ಷೆ ವಿಧಿಸಲು ಸೂಚಿಸಿರುವುದು …

Leave a Reply

error: Content is protected !!