Breaking News

ಉವಾಲ್ಡೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯಿಂದ ಗುಂಡಿನ ದಾಳಿ- 18 ಮಕ್ಕಳು, ಓರ್ವ ಶಿಕ್ಷಕ ಸೇರಿ ಒಟ್ಟು 21 ಮಂದಿ ಸಾವು

Spread the love

ಅಮೆರಿಕ: ಟೆಕ್ಸಾಸ್‌ನ ಪ್ರಾಥಮಿಕ ಶಾಲೆಯಲ್ಲಿ 18ರ ಹರೆಯದ ವ್ಯಕ್ತಿಯೊಬ್ಬ ನಡೆಸಿದ ಅತ್ಯಂತ ಅಮಾನವೀಯ ಗುಂಡಿನ ದಾಳಿಯಲ್ಲಿ 18 ಮಕ್ಕಳು ಮತ್ತು ಓರ್ವ ಶಿಕ್ಷಕ ಸೇರಿ 21 ಮಂದಿ ಸಾವನ್ನಪ್ಪಿದ್ದಾರೆ. ಟೆಕ್ಸಾಸ್ ಗೌವರ್ನರ್ ಜಾರ್ಜ್ ಅಬಾಟ್ ಈ ಘಟನೆಯ ಕುರಿತು ಮಾಹಿತಿ ನೀಡಿದ್ದು, ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್, ಟೆಕ್ಸಾಸ್‌ ಗೌವರ್ನರ್‌ಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅಗತ್ಯವಿರುವ ಎಲ್ಲಾ ರೀತಿಯ ನೆರವು ನೀಡುವುದಾಗಿಯೂ ಭರವಸೆ ನೀಡಿದ್ದಾರೆ. 2012ರಲ್ಲಿ ಕನೆಕ್ಟಿಕಟ್‌ನ ನ್ಯೂಟೌನ್‌ನಲ್ಲಿರುವ ಸ್ಯಾಂಡಿ ಹುಕ್ ಎಲಿಮೆಂಟರಿ ಶಾಲೆಯಲ್ಲಿ ನಡೆದ ಭೀಕರ ಗುಂಡಿನ ದಾಳಿ ಬಳಿಕ ನಡೆದ ಅತಿ ದೊಡ್ಡ ದುರಂತ ಇದಾಗಿದೆ.
ಇತ್ತೀಚೆಗೆ, ನ್ಯೂಯಾರ್ಕ್​ನ ಬಫಲೊ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದರು. ಎರಡು ವಾರಗಳ ನಂತರ ಮತ್ತೆ ಈ ಘಟನೆ ನಡೆದಿದೆ. ಆ ಘಟನೆಯನ್ನು ‘ಜನಾಂಗೀಯ ಪ್ರೇರಿತ’ ಸಾಮೂಹಿಕ ಗುಂಡಿನ ದಾಳಿ ಎಂದು ಹೇಳಲಾಗಿತ್ತು.


Spread the love

About Karnataka Junction

[ajax_load_more]

Check Also

ವಲಯ ಅರಣ್ಯಧಿಕಾರಿ ಸೇವಾಲಾಲ ಮಾಲಾಧಾರಿಗಳು ಅವಾಚ್ಯವಾಗಿ ನಿಂಧಿಸಿದ್ದಾರೆ ಎಂದು ಆರೋಪಿಸಿ: ಮನವಿ

Spread the love ಕಲಘಟಗಿ: ಫೆ. 15 ರಂದು ಜರುಗುವ ಸಂತ ಸೇವಾಲಾಲ ಜಯಂತಿ ಅಂಗವಾಗಿ ಸೇವಾಲಾಲ ಮಾಲಾಧಾರಿಗಳು ಅರಣ್ಯ …

Leave a Reply

error: Content is protected !!