ಹುಬ್ಬಳ್ಳಿ; ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ರೌಡಿ ಶೀಟರ್ ನೊಬ್ಬ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಹಳೆ ಹುಬ್ಬಳ್ಳಿಯ ಆನಂದನಗರದ ಪಾನ್ ಶಾಪ್ ಬಳಿ ವಿಮಲ್ ಗುಟ್ಕಾ ತಿನ್ನುವ ವಿಚಾರವಾಗಿ ಮೆಹಬೂಬ್ ಸಾಬ್ ಕಳಸದ (23) ಗೆ ಹಳೆ ಹುಬ್ಬಳ್ಳಿ ರೌಡಿ ಶೀಟರ್ ಗೌಸ್ ಮೋದಿನ್ ತಹಶಿಲ್ದಾರ ಎಂಬಾತ ತನ್ನ ಬಳಿಯೇ ಇದ್ದ ಹರಿತವಾದ ಆಯುಧಿಂದ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಮೆಹಬೂಬ್ ಕಳಸನನ್ನು ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೇ ಮೆಹಬೂಬ್ ಸಾಬ್ ಕಳಸ ಸಾವನ್ನಪ್ಪಿದ್ದಾನೆ. ಹಳೆ ಹುಬ್ಬಳ್ಳಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಾರೆ.
