Breaking News

ಜಿತೇಂದ್ರ ಮಜೇಥಿಯಾಗೆ ‘ಸೇವಾ ಗೌರವ ಪ್ರಶಸ್ತಿ

Spread the love

ಹುಬ್ಬಳ್ಳಿ; ಗಾಂಧಿವಾದಿ, ಸ್ವಾತಂತ್ರ್ಯ ಸೇನಾನಿ ಗುದ್ಲೆಪ್ಪ ಹಳ್ಳಿಕೇರಿ ಸ್ಮರಣಾರ್ಥ ನೀಡುವ ಪ್ರಸಕ್ತ ಸಾಲಿನ ‘ಸೇವಾ ಗೌರವ’ ಪ್ರಶಸ್ತಿಗೆ ಹುಬ್ಬಳ್ಳಿಯ ಪ್ರತಿಷ್ಠಿತ
ಮಜೇಥಿಯಾ ಫೌಂಡೇಶನ್ ಸಂಸ್ಥಾಪಕ ಜಿತೇಂದ್ರ ಮಜೇಥಿಯಾ ಆಯ್ಕೆಯಾಗಿದ್ದಾರೆ.
ಹಾವೇರಿ ತಾಲ್ಲೂಕಿನ ಹೊಸರಿತ್ತಿ ಗ್ರಾಮದ ಮಹಾತ್ಮ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಗುದ್ಲೆಪ್ಪ ಹಳ್ಳಿಕೇರಿಯವರ ಜೂನ್ 6 ರಂದು ನಡೆಯಲಿರುವ 117ನೇ ಜನ್ಮದಿನೋತ್ಸವದಂದು ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ‘ಸೇವಾ ಗೌರವ’ ಪ್ರಶಸ್ತಿಯು ₹20 ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ಫಲಕಗಳನ್ನು ಒಳಗೊಂಡಿದೆ.
ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲರಾದ ಜನರಿಗೆ, ಅಶಕ್ತ ಮಕ್ಕಳಿಗೆ ಹಾಗೂ ಅಸಹಾಯಕ ಮಹಿಳೆಯರಿಗೆ ಆರ್ಥಿಕ, ಶೈಕ್ಷಣಿಕ ಹಾಗೂ ಆರೋಗ್ಯ ಸೌಲಭ್ಯಗಳನ್ನು ಜಿತೇಂದ್ರ ಮಜೇಥಿಯಾ ಅವರು ತಮ್ಮ ಫೌಂಢೇಶನ್‌ ಮೂಲಕ ಕಲ್ಪಿಸಿದ್ದಾರೆ. ಅವರ ಸೇವೆಯನ್ನು ಗುರುತಿಸಲಾಗಿದೆ.


Spread the love

About Karnataka Junction

[ajax_load_more]

Check Also

ಅ,27 ರಂದು ಯಕ್ಷಲೋಕ ವಿಜಯ ಪ್ರಸಂಗ ಪ್ರದರ್ಶನ

Spread the loveಹುಬ್ಬಳ್ಳಿ: ಹುಬ್ಬಳ್ಳಿಯ ಬಂಟ ಹವ್ಯಾಸಿ ಕಲಾವಿದರ ಸಂಘ, ಕಲಾರಂಗದ ವತಿಯಿಂದ ಅ. 27ರಂದು ಸಂಜೆ 4 ಗಂಟೆಗೆ …

Leave a Reply

error: Content is protected !!