ಬಸವರಾಜ ಹೊರಟ್ಟಿ ವಿರುದ್ಧ ಶ್ರೀಶೈಲ ಗಡದಿನ್ನಿ ಕಣಕ್ಕೆ ಪೈನಲ್

Spread the love

ಬೆಂಗಳೂರು : ವಿಧಾನಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ಜೆಡಿಎಸ್ ಅಭ್ಯರ್ಥಿ ಘೋಷಣೆ ಮಾಡಿದ್ದು, ಶ್ರೀಶೈಲ ನಿಂಗಪ್ಪ ಗಡದಿನ್ನಿ ಅವರನ್ನು ಬಸವರಾಜ್ ಹೊರಟ್ಟಿ ವಿರುದ್ಧ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ದಳಪತಿಗಳು ಮುಂದಾಗಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ನಿಂಗಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬಸವರಾಜ್ ಹೊರಟ್ಟಿ ಅವರ ಜತೆಯೇ ಚುನಾವಣಾ ಕೆಲಸ ಮಾಡಿದ್ದೇನೆ. ಅವರ ಜೊತೆಯಲ್ಲಿದ್ದಾಗ ನನ್ನನ್ನ ಕಡೆಗಣಿಸಿದ್ದರು. ಶಿಕ್ಷಕರ‌ ಮನಗೆಲ್ಲುವಲ್ಲಿ ಹೊರಟ್ಟಿ ವಿಫಲರಾಗಿದ್ದಾರೆ ಎಂದು ಹೊರಟ್ಟಿ ಅವರ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.ಈಗ ಹೊರಟ್ಟಿ ಅವರಿಗೆ ವಯಸ್ಸಾಗಿದೆ. ಜೆಡಿಎಸ್ ಪಕ್ಷ ಅವರಿಗೆ ಎಲ್ಲವನ್ನೂ ಕೊಟ್ಟಿದೆ. ಅಧಿಕಾರದ ಆಸೆಯಿಂದ ಬಿಜೆಪಿಗೆ ಹೋಗಿದ್ದಾರೆ ಎಂದು ಗಡದಿನ್ನಿ ಹೇಳಿದ್ದಾರೆ.


Spread the love

Leave a Reply

error: Content is protected !!