Breaking News

MYGOಹೆಲ್ಪ್​ಡೆಸ್ಕ್​ ಸೇವೆ ಇನ್ನು ಮುಂದೆ ವಾಟ್ಸ್​ಆ್ಯಪ್​ ಮೂಲಕ ಸಹ ಲಭ್ಯ

Spread the love

ಬೆಂಗಳೂರು: ವಾಹನ ಸವಾರರ ಸಹಾಯಕ್ಕಾಗಿ ಜಾರಿ ಮಾಡಿದ್ದ ಡಿಜಿಲಾಕರ್​ ಸೇವೆಯನ್ನು ಸರ್ಕಾರ ಬಹಳಷ್ಟು ಸರಳೀಕೃತ ಮಾಡಿದೆ. ಡಿಜಿಲಾಕರ್ ಅನ್ನು ಸುಲಭವಾಗಿ ಪಡೆದುಕೊಳ್ಳಲು ವಾಟ್ಸ್​ಆ್ಯಪ್​ ಮೂಲಕ ಸಂದೇಶ ಕಳುಹಿಸಿ ಪಡೆದುಕೊಳ್ಳಬಹುದು ಎಂದು ತಂತ್ರಜ್ಞಾನ ಮತ್ತು ಐಟಿ ಇಲಾಖೆ ತಿಳಿಸಿದೆ.
ಡಿಜಿಟಲೀಕರಣದ ಮೂಲಕ ಸರ್ಕಾರಿ ಸೇವೆಗಳ ಲಭ್ಯತೆಯನ್ನು ಇನ್ನಷ್ಟು ಸರಾಗಗೊಳಿಸಲು ಡಿಜಿಲಾಕರ್ ಸೇವೆಯನ್ನು ಜನರು ಇದೀಗ ವಾಟ್ಸ್​ಆ್ಯಪ್​ ಮೂಲಕವೂ ಪಡೆದುಕೊಳ್ಳಬಹುದಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.
*ಮೈ ಗೋ My Go* ಹೆಲ್ಪ್‌ಡೆಸ್ಕ್ ಈಗ ಡಿಜಿಲಾಕರ್ ಸೇವೆಗಳಿಂದ ಪ್ರಾರಂಭವಾಗುವ ಸಮಗ್ರ ನಾಗರಿಕ ಬೆಂಬಲ ಮತ್ತು ಸಮರ್ಥ ಆಡಳಿತಕ್ಕಾಗಿ ಸೇವೆಗಳನ್ನು ನೀಡುತ್ತದೆ.ಹೊಸ ಸೇವೆಯಿಂದ ಪಾನ್​ ಕಾರ್ಡ್, ಚಾಲನಾ ಪರವಾನಗಿ, ಶೈಕ್ಷಣಿಕ ದಾಖಲಾತಿ, ಉತ್ತೀರ್ಣ ಪ್ರಮಾಣಪತ್ರ, ವಾಹನ ನೋಂದಣಿ ಪ್ರಮಾಣಪತ್ರ, ವಿಮಾ ಪಾಲಿಸಿ, ದ್ವಿಚಕ್ರ ವಾಹನ ಪರವಾನಗಿ, ಮಾರ್ಕ್ಸಕಾರ್ಡ್​, ವಿಮಾ ಪಾಲಿಸಿ ದಾಖಲೆ ಸೇರಿದಂತೆ ಇತ್ಯಾದಿ ದಾಖಲೆಗಳನ್ನು ​ಡಿಜಿಲಾಕರ್​ನಲ್ಲಿ ಸೇವ್​ ಮಾಡಬಹುದಾಗಿದೆ.
ವಾಟ್ಸ್​ಆ್ಯಪ್​ ಬಳಕೆದಾರರು ತಮ್ಮ ವಾಟ್ಸಾಪ್ ಸಂಖ್ಯೆಯಿಂದ +91 9013151515 ಸಹಾಯವಾಣಿಗೆ ನಮಸ್ತೆ ಅಥವಾ ಹಾಯ್ ಅಥವಾ ಡಿಜಿಲಾಕರ್ ಎಂದು ಟೈಪ್​ ಮಾಡಿ ಕಳುಹಿಸುವ ಮೂಲಕ ಚಾಟ್‌ಬಾಟ್ ಅನ್ನು ಪಡೆದುಕೊಳ್ಳ ಬಹುದಾಗಿದೆ.ಕೋವಿಡ್​ ಮಹಾಮಾರಿ ಕಾರಣಕ್ಕಾಗಿ ಕೇಂದ್ರ ಸರ್ಕಾರ 2020 ರಲ್ಲಿ MYGOV ಹೆಲ್ಪ್​ಡೆಸ್ಕ್​ ಆರಂಭಿಸಿತ್ತು. ಇದನ್ನು ಕೊರೊನಾ ಹೆಲ್ಪ್​ಡೆಸ್ಕ್​ ಅಂತಲೂ ಕರೆಯುತ್ತಾರೆ. ಕೋವಿಡ್​ ಕುರಿತ ಸುದ್ದಿ, ಲಸಿಕೆ ಮಾಹಿತಿ, ಲಸಿಕಾ ಪ್ರಮಾಣಪತ್ರ ಡೌನ್​ಲೋಡ್ ​ಮಾಡಿಕೊಳ್ಳಲು ಇದು ಸಹಕಾರಿಯಾಗುತ್ತಿತ್ತು. ಇದೀಗ ಈ ಡೆಸ್ಕ್​ ಡಿಜಿಲಾಕರ್​ ಸೇವೆಗೂ ಬಳಕೆಯಾಗಲಿದೆ. ಡಿಜಿಲಾಕರ್​ ಅನ್ನು ಈವರೆಗೂ 10 ಕೋಟಿ ಜನರು ನೋಂದಣಿ ಮಾಡಿಕೊಂಡಿಸಿದ್ದಾರೆ.


Spread the love

About gcsteam

    Check Also

    ಹುಬ್ಬಳ್ಳಿ ಕೆಎಲ್ ಇ ಸಂಸ್ಥೆಯ ಘಟಿಕೋತ್ಸವ

    Spread the loveಹುಬ್ಬಳ್ಳಿ ಕೆಎಲ್ ಇ ತಾಂತ್ರಿಕ ವಿಶ್ವವಿದ್ಯಾಲಯದ ಘಟಿಕೋತ್ಸವ ಸಮಾರಂಭಕ್ಕೆ ವಿವಿಯ ಕುಲಪತಿ, ಅಧ್ಯಕ್ಷ ಪ್ರಭಾಕರ ಕೋರೆ, ಉಪಕುಲಪತಿ …

    Leave a Reply