ಸೌದಿ ಅರೇಬಿಯಾ : ಇತ್ತೀಚಿನ ದಿನಗಳಲ್ಲಿ ಒಂದು ಮದುವೆಯೇ ಕಷ್ಟ ಎನ್ನುವಂತಾಗಿದೆ. ವರನಿಗೆ ಸೂಕ್ತ ವಧು ಸಿಗ್ತಿಲ್ಲ. ಇದೇ ಕಾರಣಕ್ಕೆ ಅನೇಕರು ಮದುವೆಯಾಗದೆ ಉಳಿದಿದ್ದಾರೆ. ಅಂತೂ ಇಂತೂ ಸಾಲ ಮಾಡಿ ಒಂದು ಮದುವೆಯಾದವರು ಉಸ್ಸಪ್ಪ ಎನ್ನುತ್ತಿದ್ದಾರೆ. ಇನ್ನು ಭಾರತದಲ್ಲಿ ಕೆಲವೇ ಕೆಲವು ಮಂದಿ ಒಂದಕ್ಕಿಂತ ಹೆಚ್ಚು ಮದುವೆಯಾಗಿದ್ದಾರೆ. ಸಿನಿಮಾಗಳಲ್ಲಿ ಇತ್ತೀಚಿನ ದಿನಗಳಲ್ಲಿ ಎರಡು ಮದುವೆ ಕಾಮನ್ ಆಗಿದೆ. ಆದ್ರೆ ಎರಡಕ್ಕಿಂತ ಹೆಚ್ಚು ಮದುವೆಯಾಗಿರುವ ಸುದ್ದಿಗಳು ಬಹಳ ಅಪರೂಪ. ಹಾಗೆ ಎರಡಕ್ಕಿಂತ ಹೆಚ್ಚು ಮದುವೆಯಾದವರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಎರಡು ಮದುವೆಯಾಗಿ ಸಾಕಪ್ಪ ಸಂಸಾರ ಎನ್ನುವವರಿಗೆ ಶಾಕಿಂಗ್ ನ್ಯೂಸ್ ಒಂದಿದೆ. ಎರಡು ಜಡೆ ಸೇರಿದ್ರೆ ಜಗಳ ಎಂಬ ಮಾತೊಂದಿದೆ. ಅದೇನೇ ಇರಲಿ, ಎರಡಲ್ಲ, ಮೂರಲ್ಲ ನಾಲ್ಕು ಜಡೆಗಳ ಮಧ್ಯೆ ವ್ಯಕ್ತಿಯೊಬ್ಬ ಸಂಸಾರ ನಡೆಸುತ್ತಿದ್ದಾನೆ ಅಂದ್ರೆ ನೀವು ನಂಬ್ಲೇಬೇಕು. ಸೌದಿ ಅರೇಬಿಯಾದ ವ್ಯಕ್ತಿಯೊಬ್ಬ ನಾಲ್ಕು ಮಹಿಳೆಯರನ್ನು ಮದುವೆಯಾಗಿದ್ದಾನೆ. ವಿಚಿತ್ರವೆಂದ್ರೆ ಎಲ್ಲರೂ ಒಂದೇ ಶಾಲೆಯಲ್ಲಿದ್ದಾರೆ. ಸುಖ ಸಂಸಾರ ನಡೆಸುತ್ತಿರುವ ಆತನ ಕುಟುಂಬದ ಕಥೆ ಏನು ಎಂಬುದನ್ನು ನಾವಿಂದು ಹೇಳ್ತೇವೆ.
ಒಂದು ಊರಿನಲ್ಲಿ ಒಂದು ಪತ್ನಿ, ಇನ್ನೊಂದು ಊರಿನಲ್ಲಿ ಇನ್ನೊಂದು ಪತ್ನಿ, ಮತ್ತೊಂದು ಊರಿನಲ್ಲಿ ಮತ್ತೊಂದು ಪತ್ನಿ ಹೊಂದಿದ್ದರೆ ಅದು ಬೇರೆ ಸಂಗತಿ. ಪತ್ನಿಯರಿಗೆ ಮೋಸ ಮಾಡಿ ಈತ ಮದುವೆಯಾಗ್ತಿದ್ದಾನೆ ಎನ್ನಬಹುದು. ಆದ್ರೆ ಈ ಭೂಪ ಒಂದೇ ಶಾಲೆಯಲ್ಲಿರುವ ನಾಲ್ವರಿಗೆ ಗಂಡ. ಶಾಲೆಯ ವಿದ್ಯಾರ್ಥಿನಿ, ಶಿಕ್ಷಕಿ, ಮೇಲ್ವಿಚಾರಕಿ ಮತ್ತು ಪ್ರಾಂಶುಪಾಲೆಯನ್ನು ಈತ ಮದುವೆಯಾಗಿದ್ದಾನೆ.
ಕಿರಿಯ ಹೆಂಡತಿ ಇನ್ನೂ ಓದುತ್ತಿದ್ದಾಳೆ : ಮದುವೆಗೆ ಒಂದು ವಯಸ್ಸಿನ ಅಂತರವಿರಬೇಕು. ಆದ್ರೆ ಇಲ್ಲಿ ಬಹಳ ವಿಚಿತ್ರವೆನ್ನಿಸುವ ಸಂಗತಿಯಿದೆ. ವ್ಯಕ್ತಿ, ವಿದ್ಯಾರ್ಥಿನಿಯನ್ನೂ ಬಿಟ್ಟಿಲ್ಲ. ಆತನ ಕಿರಿಯ ಪತ್ನಿ ಇನ್ನೂ ಓದ್ತಿದ್ದಾಳೆ. ಪ್ರಸ್ತುತ ಮಾಧ್ಯಮಿಕ ತರಗತಿಯಲ್ಲಿ ಆಕೆ ವಿದ್ಯಾಭ್ಯಾಸ ಮಾಡ್ತಿದ್ದಾಳೆ. ವಿದ್ಯಾರ್ಥಿನಿಗೆ ವಿದ್ಯಾಭ್ಯಾಸ ಹೇಳುವ ಶಿಕ್ಷಕಿ ಪತಿ ಕೂಡ ವಿದ್ಯಾರ್ಥಿನಿಯ ಗಂಡನೇ. ಇನ್ನು ವಿದ್ಯಾರ್ಥಿನಿ ಹಾಗೂ ಶಿಕ್ಷಕಿ ಗಂಡನೇ ಮೇಲ್ವಿಚಾರಕಿ ಪತಿ ಕೂಡ ಹೌದು. ಬರೀ ಇಷ್ಟಕ್ಕೆ ಆತನ ಸರಣಿ ಮದುವೆ ನಿಂತಿಲ್ಲ. ಈ ಮೂವರ ಪತಿಯೇ ಪ್ರಾಂಶುಪಾಲೆಯ ಪತಿ. ಇದು ನಡೆದಿರೋದು ನೈಋತ್ಯ ಸೌದಿ ಅರೇಬಿಯಾದ ಜಿಜಾನ್‌ನಲ್ಲಿ. ಜಿಜಾನ್ ನಲ್ಲಿರುವ ಶಾಲೆಯೊಂದರ ನಾಲ್ವರು ಮಹಿಳೆಯರಿಗೆ ಗಂಡ ಒಬ್ಬನೆ.