ಹೊರಟ್ಟಿಯವರಿಗೇ ಟಿಕೆಟ್ ಅಂತಿಮ- ಶಾಸಕ ಅರವಿಂದ ಬೆಲ್ಲದ

Spread the love

ಧಾರವಾಡ; ವಿಧಾನ ಪರಿಷತ್ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೇ ಪಶ್ಚಿಮ ಶಿಕ್ಷಕರ
ವಿಧಾನ ಪರಿಷತ್ ಭಾರತೀಯ ಜನತಾ ಪಕ್ಷದ ಟಿಕೇಟ್ ಪೈನಲ್ ಆಗುತ್ತದೆ ಎಂದು ಶಾಸಕ ಅರವಿಂದ ಬೆಲ್ಲದ ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ .ಮಾತನಾಡಿದ ಅವರು, ಭಾರತೀಯ ಜನತಾ ಪಕ್ಷ
ಈ ಬಗ್ಗೆ ಅಧಿಕೃತವಾಗಿ ಘೋಷಿಸಲಿದೆ. ಭಾರತೀಯ ಜನತಾ ಪಕ್ಷದ ಟಿಕೇಟ್ ಬಗ್ಗೆ ಯಾವುದೇ ಅನಗತ್ಯವಾದ ಗೊಂದಲ ಬೇಡಾ. ಈಗಾಗಲೇ ನಮ್ಮ ರಾಜ್ಯ ರಾಷ್ಟ್ರೀಯ ಮಟ್ಟದ ನಾಯಕರು ಬಸವರಾಜ ಹೊರಟ್ಟಿ ಅವರಿಗೆಯೇ ಟಿಕೇಟ್ ನೀಡುವುದಾಗಿ ಹೇಳಿದ್ದಾರೆ. ಆದ್ದರಿಂದ ಈ ವಿಷಯದಲ್ಲಿ ಸಂಶಯ ಬೇಡಾ. ಆದ್ದರಿಂದ ಬಸವರಾಜ
ಹೊರಟ್ಟಿ ಅವರಿಗೆ ಫೈನಲ್ ಆಗಿಯೇ ಆಗುತ್ತೆ ಎಂದು ಸ್ಪಷ್ಟಪಡಿಸಿದರು. ಇನ್ನು ಇದೇ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ
ಮೋಹನ್ ಲಿಂಬಿಕಾಯಿ ಮೊದನಿಂದಲೂ ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸುತ್ತಿದ್ದಾರೆ.ಆದರೆ,ಬಸವರಾಜ ಹೊರಟ್ಟಿಯವರಿಗೆ ಟಿಕೆಟ್ ಫೈನಲ್ ಆಗುತ್ತೆ. ಟಿಕೆಟ್ ಫೈನಲ್ ಆಗೋದಕ್ಕಿಂತ ಮುಂಚೆ ಭಾರತೀಯ ಜನತಾ ಪಕ್ಷದ ಕಚೇರಿ ಉದ್ಘಾಟನೆ ಯಾಕೆ ಅನ್ನೋ ಪ್ರಶ್ನೆಗೆ, ಚುನಾವಣೆ ಕೆಲಸ ಬಹಳ ಇರುತ್ತೆ. ಹೀಗಾಗಿ, ಕಚೇರಿ ಆರಂಭಿಸಿದ್ದಾರೆ‌ ಎಂದರು.
*ಟಿಕೇಟ್ ಘೋಷಣೆ ಮುನ್ನ ಚುನಾವಣಾ ಪ್ರಚಾರ ಕಚೇರಿ ಉದ್ಘಾಟನೆ*
ಇನ್ನು ಭಾರತೀಯ ಜನತಾ ಪಕ್ಷದ ವತಿಯಿಂದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಅಧಿಕೃತ ಅಭ್ಯರ್ಥಿಯಾಗಿ ಘೋಷಣೆ ಮಾಡುವ ಮುನ್ನವೇ ನಗರದ ಹೆಡ್ ಪೋಸ್ಟ್ ಬಳಿ ಭಾರತೀಯ ಜನತಾ ಪಕ್ಷದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಪ್ರಚಾರ ಕಾರ್ಯಾಲಯವನ್ನು ಲೋಕಾರ್ಪಣೆ ಮಾಡಲಾಯಿತು. ಆದರೆ ಇನ್ನು ಸಹ ಭಾರತೀಯ ಜನತಾ ಪಕ್ಷ ಯಾವುದೇ ಅಭ್ಯರ್ಥಿಯನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.‌ ಈ ಸಂದರ್ಭದಲ್ಲಿ ಪಕ್ಷದ ಶಾಸಕರು, ನಾಯಕರು ಹಾಗೂ ಕಾರ್ಯಕರ್ತ ಸಮ್ಮುಖದಲ್ಲಿ ಪ್ರಚಾರ ಕಾರ್ಯಾಲಯ ಉದ್ಘಾಟನೆ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಯಿತು.
* ಗುಸು ಗುಸು ಮಾತು* ಇನ್ನೊಂದು ಕಡೆ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಅವರನ್ನ ಕಡೆಗಣೆನೆ ಮಾಡಿದ್ದು ಸಹ ಇಂದಿನ ಕಾರ್ಯಕ್ರಮದ ವೇಳೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ತಮ್ಮಲ್ಲಿಯೇ ಮಾತನಾಡಿಕೊಂಡಿದ್ದು ಸಹ ಕಂಡುಬಂದಿತು ‌


Spread the love

About gcsteam

    Check Also

    ವಾಮ ಮಾರ್ಗದಿಂದ ಅಧಿಕಾರ ಹಿಡಿಯಲು ಹೊರಟ ಕಾಂಗ್ರೆಸ್ ಗೆ ಮುಖಭಂಗ- ಬಿಜೆಪಿ ವಕ್ತಾರ ರವಿ ನಾಯಕ

    Spread the loveಹುಬ್ಬಳ್ಳಿ :ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ಜನತಾ ಪಾರ್ಟಿ ಅಧಿಕಾರವನ್ನು …

    Leave a Reply