ಪ್ರೇಯಸಿಗಾಗಿ ಸ್ನೇಹಿತನನ್ನೇ ಖತಂ ಮಾಡಿದ ದೋಸ್ತ್ ನ ದೋಸ್ತ್ ರು ಈಗ ಅಂಧರ

Spread the love

ಹುಬ್ಬಳ್ಳಿ; ಸುತಗಟ್ಟಿ ಬಳಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗಾರ ರಾಘವೇಂದ್ರ ಕಮತರಗೆ ಸಹಾಯ ಮಾಡಿದ ಆರೋಪದ ಮೇಲೆ ಮೂವರನ್ನು ಇಂದು ನವನಗರ ಪೊಲೀಸರು ಬಂಧಿಸಿದ್ದಾರೆ.
ರಾಘವೇಂದ್ರ ಕಮತರ ಕೊಲೆ ಮಾಡಿದ ನಂತರ ವಿನಯ ಮೇಘರಾಜ್ ಶವ ಸಾಗಿಸಲು ಜಮೀನು ಮಾಲೀಕ ಕಮ್ ರಾಘವೇಂದ್ರ ಕಮತರ ಸ್ನೇಹಿತ ನಾಗೇಶ ಪಾನ್ಸೆ, ಸುಮುಧರ ಪೂಜಾರ ಹಾಗೂ ಕೃಷ್ಣ ,ಕೆ. ಅವರನ್ನು ಬಂಧನ ಮಾಡಿ ಧಾರವಾಡ ಸೆಂಟ್ರಲ್ ಜೇಲಿಗೆ ಕಳುಹಿಸಿಕೊಟ್ಡಿದ್ದಾರೆ.
ಹುಬ್ಬಳ್ಳಿ ಇಂದ್ರಪ್ರಸ್ಥ ನಗರದ ನಿವಾಸಿ ವಿನಯ ಹೇಮಂತ ಮೇಘರಾಜ್ (20) ನನ್ನ ಅತನ ಸ್ನೇಹಿತ ರಾಘವೇಂದ್ರ ಕಮತರ ತನ್ನ ಹುಡುಗಿಯ ಬೆನ್ನು ಬಿದ್ದ ಕಾರಣಕ್ಕೆ ಇತ್ತೀಚಿಗೆ ಕೊಲೆ ಮಾಡಲಾಗಿತ್ತು.
ಒಂದೇ ಕಾಲೇಜಿನಲ್ಲಿ ವಿನಯ ಹೇಮಂತ ಮೇಘರಾಜ್ , ರಾಘವೇಂದ್ರ ಫಕೀರಪ್ಪ ಕಮತರ ಹಾಗೂ ಇವರಿಬ್ಬರ ನಡುವಿನ ಕಂದಕಕ್ಕೆ ಕಾರಣವಾದ ಪ್ರೇಯಿಸಿ ಸಹ ಇದೇ ಕಾಲೇಜಿನ ಅವರ ಸಹಪಾಠಿ ಸಹ.
ರಾಘವೇಂದ್ರ ಕಮತರ ಮತ್ತು ವಿನಯ ಮೇಘರಾಜ್ ಅವರ ಸ್ನೇಹಿತೆ ಜೊತೆಗೆ ಇರುತ್ತಿದ್ದರು. ರಾಘವೇಂದ್ರ ಮೊದಲು ತನ್ನ ಪ್ರೇಯಿಸಿ ರಂಜಿತಾಳನ್ನ ಪ್ರೀತಿ ಮಾಡುತಿದ್ದ. ನಂತರ ವಿನಯ ಹೇಮಂತ ಮೇಘರಾಜ್ ರಾಘವೇಂದ್ರ ಪ್ರೇಯಿಸಿಯ ಜೊತೆಗೆ ಬೆನ್ನು ಬಿದ್ದ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ರಾಘವೇಂದ್ರ ಸುತಗಟ್ಡಿ ಬಳಿಯ ಕಾನ್ ಕಾರ್ಡ್ ಲೇಔಟ್ ಬಳಿ ಕರೆದು ಕೊಲೆ ಮಾಡಿದ್ದ‌.


Spread the love

About gcsteam

    Check Also

    ಸಿದ್ದರಾಮಯ್ಯ ಹೇಳಿಲ್ವಾ ಫ್ರೀ ಎಂದು, ಕರೆಂಟ್ ಬಿಲ್ ಕಟ್ಟಲ್ಲವೆಂದು ಆವಾಜ್ ಹಾಕಿದ ಗ್ರಾಮಸ್ಥರು

    Spread the loveಹುಬ್ಬಳ್ಳಿ:  ಕಾಂಗ್ರೆಸ್ ಪಕ್ಷವು ಚುನಾವಣಾ ಪೂರ್ವದಲ್ಲಿ ನೀಡಿದ್ದ 200 ಯುನಿಟ್ ವಿದ್ಯುತ್ ಉಚಿತದ ಗ್ಯಾರಂಟಿ ಇಸ್ಕಾಂ ಸಿಬ್ಬಂದಿಯ …

    Leave a Reply