ಹುಬ್ಬಳ್ಳಿ;
ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ ರಚನೆ ವರಿಷ್ಠರಿಗೆ ಬಿಟ್ಟಿದ್ದು ಎಂದು ಗಣಿ ಕಲ್ಲಿದ್ದಲು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ಯ ಅಭಿಪ್ರಾಯಪಟ್ಟರು.
ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು
ಪ್ರತಿಯೊಬ್ಬ ಕಾರ್ಯಕರ್ತರು ಸಹ ಅಧಿಕಾರ ಬೇಕು ಎನ್ನುತ್ತಾರೆ. ಆದರೆ ಸಚಿವ ಸಂಪುಟ ವಿಸ್ತರಣೆ ನಿರ್ಧಾರ ಪಕ್ಷದ ಹಿರಿಯ ನಾಯಕರ
ವಿವೇಚನೆಗೆ ಬಿಟ್ಟಿದ್ದು, ಮುಖ್ಯಮಂತ್ರಿಗಳು ಸಹ
ಕೇಂದ್ರದ ವರಿಷ್ಠರೊಂದಿಗೆ ಸಮಾಲೋಚನೆ ಮಾಡಿ ನಿರ್ಧಾರ ಮಾಡುವಂತಹ ವಿಚಾರವಾಗಿದೆ.
ಸಚಿವ ಸಂಪುಟದ ಕುರಿತು ಪತ್ರಿಕೆಯಲ್ಲಿ, ಮಾಧ್ಯಮಗಳಲ್ಲಿ ಆ ರೀತಿ, ಈ ರೀತಿಯೆಂದು ಸುದ್ದಿಗಳು ಬರುತ್ತವೆ. ಹೋಗುತ್ತಿವೆ ಅದು ಮಾಧ್ಯಮದವರು ಬರೆಯುವ ವಿಚಾರ ಆ ಬಗ್ಗೆ ನಾನು ಏನು ಮಾತನಾಡಲಾರೆ. ಮುಖ್ಯಮಂತ್ರಿಗಳು ವರಿಷ್ಠರ ಜೊತೆಗೆ ಸಮಾಲೋಚನೆ ಮಾಡುತ್ತಾರೆ. ಆಗ ಸಚಿವ ಸಂಪುಟದ ಪುನರ್ ರಚನೆಯೋ, ವಿಸ್ತರಣೆಯೋ ಎಂಬುದು ನಿರ್ಧಾರವಾಗಲಿದೆ ಎಂದರು. ಅದು ಇಲ್ಲಿ ಚರ್ಚೆ ಮಾಡುವ ವಿಷಯವಲ್ಲ ಎಂದ ಅವರು, ನಮ್ಮ ಪಕ್ಷ ಶಿಸ್ತಿನ ಪಕ್ಷ ಪಕ್ಷದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ಈ ಕುರಿತು ಚರ್ಚೆ ಮಾಡಿ ಒಂದು ತೀರ್ಮಾನ ತೆಗೆದುಕೊಳ್ಳುತ್ತಾರೆ. ಯಾವುದೇ ರೀತಿಯ ಗೊಂದಲ ನಮ್ಮ ಇಲ್ಲ. ಪ್ರತಿಯೊಬ್ಬ ಕಾರ್ಯಕರ್ತರು ತಮ್ಮ ತಮ್ಮ ಆಶೆ ಬೇಡಿಕೆ ಕುರಿತು ಮಾತನಾಡುತ್ತಾರೆ. ಅದನ್ನೇ ಭಿನ್ನಾಭಿಪ್ರಾಯ ಹಾಗೂ ಭಿನ್ನಮತ ಎನ್ನಲಾಗದು. ಈಗಾಗಲೇ ನಮ್ಮ ಸಾಕಷ್ಟು ಕಾರ್ಯಕರ್ತರು ಇದ್ದರೆ. ಅವರು ಅವರು ತಮ್ಮ ವಿಚಾರ ಹಾಗೂ ನಿಲುವು ಮೇಲಿಂದ ಮೇಲೆ ಹೇಳುತ್ತಾರೆ ಆದ್ದರಿಂದ ಅದು ಯಾವುದೇ ರೀತಿಯ ಭಿನ್ನಮತ ಆಗುವುದಿಲ್ಲ ಎಂದರು.
*ಬದಲಾವಣೆ ಇಲ್ಲ* ಸಚಿವ ಸಂಪುಟದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಖಾಲಿ ಇರುವ ಸಚಿವ ಸ್ಥಾನವನ್ನು ತುಂಬಿಕೊಳ್ಳುತ್ತಾರೆ ಆ ಬಗ್ಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವುದು ಬೇಡಾ. ರಾಜ್ಯಸಭಾ ಸದಸ್ಯರ ಆಯ್ಕೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ ಎಂದರು.
*ಯಾವುದೇ ಪ್ರಾಣಿ ಹಾನಿಯಾಗಿಲ್ಲ* ಧಾರವಾಡ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಯಾವುದೇ ರೀತಿಯ ಪ್ರಾಣ ಹಾನಿಯಾಗಿಲ್ಲ. ಕಳೆದ ೨೪ ಗಂಟೆಗಳಲ್ಲಿ ಪ್ರವಾಹ ಹಾಗೂ ಅಕಾಲಿಕ ಮಳೆಗೆ ಅಷ್ಟೊಂದು ತೊಂದರೆ ಆಗಿಲ್ಲ. ಈಗಾಗಲೇ ಧಾರವಾಡ ಜಿಲ್ಲಾ ಹಾನೀಗೀಡಾದ ಪ್ರದೇಶದಲ್ಲಿ ಸಮೀಕ್ಷೆ ಮಾಡುತ್ತಿದೆ. ಅಂತಹ ಗಂಭೀರ ಸ್ವರೂಪದ ಯಾವುದೇ ತೊಂದರೆ ಆಗಿಲ್ಲ ಎಂದು ಇದೇವೇಳೆ ಧಾರಾವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ್ಯ ಹೇಳಿದರು. ಹಳೆ ಹುಬ್ಬಳ್ಳಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಗೆ ಹಾನೀಗೀಡಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಂತರ ಮಾತನಾಡಿದರು.ಜನ ಜಾನುವಾರು , ಆಸ್ತಿ ಪಾಸ್ತಿ ಏನಾದರೂ ಹಾನೀಗೀಡಾದರೆ ಸಂಬಂಧಿಸಿದ ಅಧಿಕಾರಿಗಳಿಗೆ ಸಹ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದರು. ಎಪ್ರಿಲ್ ನಿಂದ ಇಲ್ಲಿ ವರೆಗೂ
ಓರ್ವ ಮನುಷ್ಯ ಹಾಗೂ 21 ಜಾನುವಾರು ಸಾವನ್ನಪ್ಪಿವೆ ಎಂದರು. ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಕಂದಾಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳಿದ್ದರು.
Check Also
ನನಗಿಂತ ಭರತ್ ಗೆ ಹೆಚ್ಚು ಮತ ನೀಡಿ ಗೆಲ್ಲಸಿ- ಸಂಸದ ಬಸವರಾಜ ಬೊಮ್ಮಾಯಿ ಮನವಿ
Spread the loveಹುಬ್ಬಳ್ಳಿ: ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದಿದ್ದ ಶಿಗ್ಗಾಂವಿ- ಸವಣೂರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವಲ್ಲಿ ಭಾರತೀಯ ಜನತಾ …