ಟರ್ಕಿ, ಇಸ್ತಾನಬುಲ್ : ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ನಿಖತ್ ಜರೀನ್ ಸ್ವರ್ಣವನ್ನು ಮುಡಿಗೇರಿಸುವ ಮೂಲಕ ಸಾಧನೆ ಮಾಡಿದ್ದಾರೆ. ಗುರುವಾರ ಟರ್ಕಿಯ ಇಸ್ತಾನ್‌ಬುಲ್‌ನಲ್ಲಿ ನಡೆದ ಫ್ಲೈ-ವೇಟ್ ಫೈನಲ್‌ನಲ್ಲಿ ಭಾರತದ ನಿಖತ್ ಜರೀನ್ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ 52 ಕೆಜಿ ವಿಭಾಗದಲ್ಲಿ ಥಾಯ್ಲೆಂಡ್‌ನ ಜಿಟ್‌ಪಾಂಗ್ ಜುಟಾಮಾಸ್ ವಿರುದ್ಧ ಜಯಗಳಿಸುವ ಮೂಲಕ ಚಿನ್ನದ ಪದಕ ಗೆದ್ದರು. ಈ ಮೂಲಕ ನಿಖತ್ ಅವರು ಮೇರಿ ಕೋಮ್, ಸರಿತಾ ದೇವಿ, ಜೆನ್ನಿ ಆರ್‌ಎಲ್ ಮತ್ತು ಲೇಖಾ ಕೆಸಿ ನಂತರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ಐದನೇ ಭಾರತೀಯ ಮಹಿಳಾ ಬಾಕ್ಸರ್ ಆಗಿದ್ದಾರೆ. 25 ವರ್ಷದ ಜರೀನ್ ಮಾಜಿ ಜೂನಿಯರ್ ಯೂತ್ ವಿಶ್ವ ಚಾಂಪಿಯನ್. ಫೈನಲ್‌ನಲ್ಲಿ ಥಾಯ್ಲೆಂಡ್ ಎದುರಾಳಿ ವಿರುದ್ಧ ನಿಖತ್ ಅಮೋಘ ಹೋರಾಟ ನಡೆಸಿ ಚಿನ್ನದ ಪದಕ ತಂದುಕೊಟ್ಟರು.
ಚಿನ್ನ ಗೆದ್ದ ಐದನೇ ಭಾರತೀಯ ಮಹಿಳೆ ನಿಜಾಮಾಬಾದ್ (ತೆಲಂಗಾಣ) ಮೂಲದ ಬಾಕ್ಸರ್ ಆರು ಬಾರಿಯ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018), ಸರಿತಾ ದೇವಿ (2006), ಜೆನ್ನಿ RL (2006) ಮತ್ತು ಲೇಖಾ ಕೆಸಿ (2006) ನಂತರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗಳಿಸಿದ ಏಕೈಕ ಐದನೇ ಭಾರತೀಯ ಮಹಿಳೆಯಾಗಿದ್ದಾರೆ. 2018 ರಲ್ಲಿ ಬಾಕ್ಸಿಂಗ್ ಪಟು ಮೇರಿ ಕೋಮ್ ಗೆದ್ದ ನಂತರ ಇದು ಭಾರತದ ಮೊದಲ ಚಿನ್ನದ ಪದಕವಾಗಿದೆ.