ತನ್ನ ಪ್ರೇಯಸಿ ಬೆನ್ನು ಬಿದ್ದಿದ್ದಕ್ಕೆ ಸ್ನೇಹಿತನನ್ನೇ ಖತಂ ಮಾಡಿದ ದೋಸ್ತ್

Spread the love

ಹುಬ್ಬಳ್ಳಿ; ಸಮೀಪದ ಸುತಗಟ್ಟಿ ಬಳಿ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ
ಯುವಕನ ಕೊಲೆ ಆಗಿದೆ. ಕೊಲೆಗೀಡಾದ ಯುವಕ ಹಳೆ ಹುಬ್ಬಳ್ಳಿ ಇಂದ್ರಪ್ರಸ್ಥ ನಗರದ ನಿವಾಸಿ ವಿನಯ ಹೇಮಂತ ಮೇಘರಾಜ್ (20) ಎಂದು ಗುರುತಿಸಲಾಗಿದೆ. ಧಾರವಾಡವಾಡದ ಜಿಎಸ್ ಎಸ್ ಕಾಲೇಜಿನಲ್ಲಿ ಡಿಪ್ಲೊಮಾ ಓದುತ್ತಿರುವ ವಿನಯ ಮೇಘರಾಜ್ ಸ್ನೇಹಿತ ರಾಘವೇಂದ್ರ ಕಮತರ ಕೊಲೆ ಮಾಡಿದ ಆರೋಪಿ.
ಒಂದೇ ಕಾಲೇಜಿನಲ್ಲಿ ವಿನಯ ಹೇಮಂತ ಮೇಘರಾಜ್ , ರಾಘವೇಂದ್ರ ಫಕೀರಪ್ಪ ಕಮತರ ಹಾಗೂ ಇವರಿಬ್ಬರ ನಡುವಿನ ಕಂದಕಕ್ಕೆ ಕಾರಣವಾದ ಪ್ರೇಯಿಸಿ ಸಹ ಇದೇ ಕಾಲೇಜಿನ ಅವರ ಸಹಪಾಠಿ ಸಹ.
ರಾಘವೇಂದ್ರ ಕಮತರ ಮತ್ತು ವಿನಯ ಮೇಘರಾಜ್ ಅವರ ಸ್ನೇಹಿತೆ ಜೊತೆಗೆ ಇರುತ್ತಿದ್ದರು. ರಾಘವೇಂದ್ರ ಮೊದಲು ತನ್ನ ಪ್ರೇಯಿಸಿ ರಂಜಿತಾಳನ್ನ ಪ್ರೀತಿ ಮಾಡುತಿದ್ದ. ನಂತರ ವಿನಯ ಹೇಮಂತ ಮೇಘರಾಜ್ ರಾಘವೇಂದ್ರ ಪ್ರೇಯಿಸಿಯ ಜೊತೆಗೆ ಬೆನ್ನು ಬಿದ್ದ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ರಾಘವೇಂದ್ರ ಸುತಗಟ್ಡಿ ಬಳಿಯ ಕಾನ್ ಕಾರ್ಡ್ ಲೇಔಟ್ ಬಳಿ ಕರೆದು ಕೊಲೆ ಮಾಡಿದ್ದಾನೆ. ನಂತರ ರಾಘವೇಂದ್ರ ನವನಗರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಈ ಕುರಿತು ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತಿದ್ದಾರೆ.


Spread the love

Leave a Reply

error: Content is protected !!