ಹೈದರಾಬಾದ್ : ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ರಿಗೆ ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ್ ಪಕ್ಷದ ಮುಖಂಡರ ಸಮ್ಮುಖದಲ್ಲಿ ಸನ್ಮಾನಿಸಿದರು.
111 ವರ್ಷದ ಸಾಲುಮರದ ತಿಮ್ಮಕ್ಕ ಸಂಸದ ಜೋಗಿನಲ್ಲಿ ಸಂತೋಷ್‌ರನ್ನು ಭೇಟಿ ಮಾಡುವುದಕ್ಕೆ ಹೈದರಾಬಾದಿಗೆ ತೆರಳಿದಿದ್ದರು. ಈ ವೇಳೆ ಪ್ರಗತಿ ಭವನದಲ್ಲಿ ಮುಖ್ಯಮಂತ್ರಿ ಚಂದ್ರಶೇಖರ್ ಅವರನ್ನು ಭೇಟಿಯಾಗಿದ್ದಾರೆ. 111 ವರ್ಷಗಳ ಕರ್ನಾಟಕದ ವೃಕ್ಷಮಾತೆಯ ಸೇವೆಗೆ ಗೌರವ ಸಲ್ಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ರು. ಗಿಡಗಳನ್ನು ನೆಡುವುದು ಕೇವಲ ಒಂದು ಕಾರ್ಯಕ್ರಮವಲ್ಲ, ಅದು ನಮ್ಮ ಬದುಕನ್ನು ಉಳಿಸಲು ಇರುವ ಮಾರ್ಗ. ಆ ಜವಾಬ್ದಾರಿಗಾಗಿ ತನ್ನ ಜೀವನವನ್ನು ಅರ್ಪಿಸಿದ ತಿಮ್ಮಕ್ಕರನ್ನು ಮೀರಿಸುವ ದೇಶಭಕ್ತರು ಯಾರೂ ಇಲ್ಲ. ತಿಮ್ಮಕ್ಕ ಹೆಚ್ಚು ಕಾಲ ಆಯುಷ್ಯ, ಆರೋಗ್ಯದೊಂದಿಗೆ ಇರಬೇಕೆಂದು ತೆಲಂಗಾಣ ಮುಖ್ಯಮಂತ್ರಿ ಕೆ. ಸಿ. ಚಂದ್ರಶೇಖರ್ ಆಶಯ ವ್ಯಕ್ತಪಡಿಸಿದರು.