Breaking News

ಪತ್ನಿಗೆ ಕಿರುಕುಳ ಆರೋಪ- ರಾಘವೇಂದ್ರ ಡಿ.ಚನ್ನಣ್ಣನವರ್ ವಿರುದ್ಧ ದೂರು ದಾಖಲು

Spread the love

ಬೆಂಗಳೂರು: ರಾಘವೇಂದ್ರ ಡಿ. ಚನ್ನಣ್ಣನವರ್ ವಿರುದ್ಧ ಪತ್ನಿಗೆ ಕಿರುಕುಳ ಆರೋಪ ಪ್ರಕರಣ ಕೇಳಿಬಂದಿದ್ದು, ನಗರದ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ರಾಘವೇಂದ್ರ 2015ರಲ್ಲಿ ರೋಜಾ ಎಂಬಾಕೆಯನ್ನು ಮದುವೆಯಾಗಿದ್ದರು.
‘ನನ್ನನ್ನು ಮದುವೆಯಾಗುವುದಕ್ಕೂ ಮುನ್ನ ಮತ್ತೊಬ್ಬ ಮಹಿಳೆಯನ್ನು ರಾಘವೇಂದ್ರ ಮದುವೆಯಾಗಿದ್ದಾರೆ. ಈ ವಿಚಾರ ಬಚ್ಚಿಟ್ಟು ನನ್ನನ್ನು ಮದುವೆಯಾದರು’ ರೋಜಾ ಆರೋಪಿಸಿದ್ದಾರೆ. ಇದೇ ವೇಳೆ, ಹೊಂದಿಕೊಂಡು ಬಾಳುವಂತೆ ತಮಗೆ ಒತ್ತಾಯಿಸು ತ್ತಿರುವುದಾಗಿಯೂ ಎಫ್ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.’ಮದುವೆಯಾದ ಒಂದು ವರ್ಷದಲ್ಲೇ ನನ್ನನ್ನು ಬಿಟ್ಟು ಆ ಮಹಿಳೆ ಜೊತೆ ರಾಘವೇಂದ್ರ ಸಂಸಾರ ಶುರು ಮಾಡಿದ್ದಾರೆ. ನನ್ನ ತಂದೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿದ್ದಾರೆ, ನನಗೆ ನ್ಯಾಯ ಬೇಕು’ ಎಂದು ಅವರು ದೂರು ನೀಡಿದ್ದಾರೆ. ಈ ಕುರಿತು ಚಂದ್ರಾ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಶೀಘ್ರವೇ ವಿಚಾರಣೆ ನಡೆಸಲಿದ್ದಾರೆ‌.


Spread the love

About Karnataka Junction

    Check Also

    ಕೆರೆಯಲ್ಲಿ ಮುಳುಗಿ ಯುವಕ ಸಾವು

    Spread the loveಹುಬ್ಬಳ್ಳಿ; ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಾಳ ಕುಸುಗಲ್ ಗ್ರಾಮದ ಬಳಿ ಕೆರೆಯಲ್ಲಿ ಗ್ರಾಮದ ದಾವಲಸಾಬ ಹೆಬಸೂರ …

    Leave a Reply

    error: Content is protected !!