ಹುಬ್ಬಳ್ಳಿ; ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆ ನೀಡಿರುವ ಎಐಸಿಸಿ ಸದಸ್ಯ ದೀಪಕ್ ಚಿಂಚೊರೆಗೆ ನೋಟೀಸ್ ಜಾರಿ ಮಾಡಲಾಗಿದೆ.ಮೇ 14 ರಂದು ಧಾರವಾಡದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಮುಸ್ಲಿಂ ಸಮುದಾಯದ ನಾಯಕರು ಏರ್ಪಡಿಸಿದ್ದ ಸಭೆಯಲ್ಲಿ ದೀಪಕ್ ಚಿಂಚೊರೆ ಮಾತನಾಡಿದ್ದರು.
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ನಾನು ಮತ್ತು ಇಸ್ಮಾಯಿಲ್ ತಮಟಗಾರ ಇಬ್ಬರು ಚುನಾವಣೆಗೆ ಸ್ಪರ್ಧೆ ಮಾಡುವವರೇ
ಯಾರು ಯಾವ ಪಕ್ಷದಿಂದ ನಿಲ್ಲುತ್ತೇವೆ ಗೊತ್ತಿಲ್ಲ,ಆದರೆ
ಟಿಕೇಟ್ ನೀಡುವ ಪಕ್ಷದಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಸಹ ವೈರಲ್ ಆಗಿತ್ತು. ಕಾರಣ
ಪಕ್ಷಕ್ಕೆ ಮುಜುಗರವಾಗುವ ರೀತಿಯಲ್ಲಿ ಹೇಳಿಕೆಗೆ ಸ್ಪಷ್ಟೀಕರಣ ನೀಡಲು ಸೂಚನೆ ನೀಡಲಾಗಿದ್ದು
ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಸಮಿತಿ ವತಿಯಿಂದ ನೋಟೀಸ್ ಜಾರಿ ಮಾಡಲಾಗಿದೆ.
ನೋಟೀಸ್ ಜಾರಿ ಮಾಡಿದ ಏಳು ದಿನಗಳ ಒಳಗೆ ಉತ್ತರ ನೀಡಲು ತಾಕೀತು ಮಾಡಿದ್ದು
ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಿಗೆ ಖುದ್ದಾಗಿ ಉತ್ತರ ನೀಡಲು ಸೂಚನೆ ಸಹ ನೀಡಲಾಗಿದೆ.
