ಬಾಗಲಕೋಟೆ : ಪಿಎಸ್ಐ ಆಕ್ರಮ ನೇಮಕಾತಿ ಡೀಲ್
ಬಾಗಲಕೋಟೆ ಜಿಲ್ಲೆಗೂ ತಲುಪಿದೆ. ಮತ್ತೊಬ್ಬ ಡೀಲ್ ಕುಳನನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶ್ರೀಕಾಂತ್ ಡಿ ಚೌರಿ ಸಿಐಡಿ ಪೊಲೀಸರ ಬಲೆಗೆ ಬಿದ್ದ ಅಕ್ರಮ ಆಸಾಮಿ.
ಮದುವೆ ಆಗಿ ನಾಲ್ಕೇ ದಿನಕ್ಕೆ ಶ್ರೀಕಾಂತ್ ಚೌರಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ಮೇ ೧೪ ರಂದು ಜಮಖಂಡಿ ನಗರದಲ್ಲಿ ಮದುವೆಯಾಗಿತ್ತು.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ತೊದಲಬಾಗಿ ಗ್ರಾಮದ ನಿವಾಸಿ ಶ್ರೀಕಾಂತ್ ಚೌರಿ.
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಆಪ್ತ ಕಾರ್ಯದರ್ಶಿ ಅಂತಿರುವ ವಿಜಿಟಿಂಗ್ ಕಾರ್ಡ್ ಪತ್ತೆ.
“ಇನ್ಸ್ಪೈರ್ ಇಂಡಿಯಾ” ಐಎಎಸ್ ಆ್ಯಂಡ್ ಕೆಎಎಸ್ ಧಾರವಾಡ ಮಾಜಿ ನಿರ್ದೇಶಕರು ಕೂಡ ಆಗಿದ್ದರು.
“ಇನ್ಸ್ಪೈರ್ ಇಂಡಿಯಾ” ಐಎಎಸ್ ಆ್ಯಂಡ್ ಕೆಎಎಸ್ ಕೋಚಿಂಗ್ ಸೆಂಟರ್ ಮೂಲಕ ಪಿಎಸ್ಐ ಅಭ್ಯರ್ಥಿಗಳಿಂದ
ಲಕ್ಷ ಲಕ್ಷ ಹಣ ಪಡೆದು ಡೀಲ್ ಮಾಡಿದ ಸಂಶಯ ಹಿನ್ನೆಲೆ ಸಿಐಡಿ ವಶಕ್ಕೆ ಪಡೆದಿದೆ. ಕಳೆದ ಆರು ದಿನದಿಂದ ಜಮಖಂಡಿಯಲ್ಲಿ ಬೀಡುಬಿಟ್ಟಿದ್ದ ಸಿಐಡಿ ಆರು ಜನರ ತಂಡ ಯರಗಟ್ಟಿಯ ಯಲ್ಲಮ್ಮ ದೇವಸ್ಥಾನಕ್ಕೆ ಹೋದ ವೇಳೆ ವಶಕ್ಕೆ ಪಡೆಯಲಾಗಿದೆ.