ಪಾಕಿಸ್ತಾನ : ಟಿಕ್‍ಟಾಕ್ ಸ್ಟಾರ್ ಗಳು ಮಾಡುವ ಎಡವಟ್ಟುಗಳು ಒಂದೆರಡಲ್ಲ. ಕೆಲವೇ ಕೆಲವು ಸೆಕೆಂಡುಗಳ ವಿಡಿಯೋ ಶೂಟ್ ಮಾಡಲು ಟಿಕ್‍ಟಾಕ್ ಸ್ಟಾರ್ ಗಳು ದೊಡ್ಡ ದೊಡ್ಡ ಅನಾಹುತ ಮಾಡಿರುವ ಸುದ್ದಿಗಳನ್ನು ನೀವು ಕೇಳಿರಬಹುದು. ಟಿಕ್‍ಟಾಕ್ ವಿಡಿಯೋ ಮಾಡಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡವರು ಅನೇಕರಿದ್ದಾರೆ. ಟಿಕ್‍ಟಾಕ್ ಮಾಡಲು ಹೋಗಿ ಪಾಕಿಸ್ತಾನಿ ಟಿಕ್‍ಟಾಕ್ ಸ್ಟಾರ್ ಒಬ್ಬಳು ದೊಡ್ಡ ಎಡವಟ್ಟು ಮಾಡಿದ್ದಾಳೆ. ಇದೀಗ ಆಕೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಹಾಗೂ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಟಿಕ್‍ಟಾಕ್‍ನಲ್ಲಿ ಸುಮಾರು 11 ಮಿಲಿಯನ್‍ಗಿಂತಲೂ ಹೆಚ್ಚು ಫಾಲೋವರ್ಸ್‍ಗಳನ್ನು ಹೊಂದಿರುವ ಹುಮೈರಾ ಇತ್ತೀಚೆಗೆ ವಿಡಿಯೋ ಶೂಟ್ ಮಾಡಿಸಿದ್ದಾಳೆ. ಕೇವಲ 10 ಸೆಕೆಂಡುಗಳ ವಿಡಿಯೋಗೆ ಆಕೆ ಗುಡಕ್ಕೇ ಬೆಂಕಿ ಇಟ್ಟಿದ್ದಾಳೆ ಎಂದು ಆರೋಪಿಸಲಾಗಿದೆ. ಸದ್ಯ ವೈರಲ್ ಆಗಿರುವ ಟಿಕ್‌ಟಾಕ್ ವಿಡಿಯೋದಲ್ಲಿ ಹುಮೈರಾ ಬಿಳಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾಳೆ. ಆಕೆ ನಡೆದುಕೊಂಡು ಬರುತ್ತಿರುವಾಗ ಹಿಂದೆ ಬೆಟ್ಟದಲ್ಲಿ ಬೆಂಕಿ ಉರಿಯುತ್ತಿರುವುದು ಕಾಣುತ್ತದೆ. ‘ನಾನು ಎಲ್ಲಿಗೆ ಹೋದರೂ ಅಲ್ಲಿ ಬೆಂಕಿ ಇರುತ್ತದೆ’ ಎಂದು ಈ ವಿಡಿಯೋಗೆ ಆಸ್ಗರ್ ಕ್ಯಾಪ್ಶನ್ ನೀಡಿದ್ದಾಳೆ. ಕೇವಲ 10 ಸೆಕೆಂಡುಗಳ ವಿಡಿಯೋಗಾಗಿ ಬೆಟ್ಟಕ್ಕೆ ಬೆಂಕಿ ಇಟ್ಟಿರುವ ಹುಮೈರಾಳಿಗೆ ಛೀಮಾರಿ ಹಾಕಿರುವ ಅನೇಕರು ಆಕೆಯನ್ನು ಅನ್‌ಫಾಲೋ ಮಾಡುವಂತೆ ಒತ್ತಾಯಿಸುತ್ತಿದ್ದಾರೆ.