ಹುಬ್ಬಳ್ಳಿ: ನಗರದ ಬೈರಿದೇವರಕೊಪ್ಪದಲ್ಲಿರುವ ಗ್ಲೋಬಲ್ ಬಿಸಿನೆಸ್ ಸ್ಕೂಲ್ ನಲ್ಲಿ ಮೇ 19 ಮತ್ತು 20ರಂದು ‘ಉತ್ಸವ್-2020’ ಆಯೋಜಿಸಲಾಗಿದೆ ಎಂದು ಕಾಲೇಜಿನ ನಿರ್ದೇಶಕ ಡಾ. ತೇಜಸ್ ಬಿ. ವ್ಯಾಸ್ ಹೇಳಿದರು.
ಉತ್ಸವದಲ್ಲಿ ಬೆಳಗಾವಿ, ಹೊಸಪೇಟೆ ಸೇರಿದಂತೆ ಉತ್ತರ ಕರ್ನಾಟಕ ಭಾಗದ ಹದಿನಾರು ಕಾಲೇಜುಗಳು ಭಾಗವಹಿಸಲಿವೆ. ಪ್ರತಿ ತಂಡಕ್ಕೆ ₹1000 ನೋಂದಣಿ ಶುಲ್ಕ ಹಾಗೂ ವಸತಿ ಸಹಿತ ನೋಂದಣಿಗೆ ₹2 ಸಾವಿರ ನಿಗದಿಪಡಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
19ರಂದು ಅತಿಥಿಗಳಾಗಿ ಜೆಎಸ್ ಡಬ್ಲ್ಯೂ ಸಿಮೆಂಟ್ ನ ಉತ್ತರ ಕರ್ನಾಟಕದ ಸೇಲ್ಸ್ ಮತ್ತು ಮಾರ್ಕೆಟಿಂಗ್ ಪ್ರಧಾನ ವ್ಯವಸ್ಥಾಪಕ ಮನೋಜ್ ಎಂ.ಎಸ್, ಬಳ್ಳಾರಿಯ ವಿಎಸ್ ಕೆಯು ವಿಶ್ರಾಂತ ಕುಲಪತಿ ಡಾ.ಎಂ.ಎಸ್. ಸುಭಾಸ್, ಜಿಇಎನ್ ಸೊಸೈಟಿ ಅಧ್ಯಕ್ಷ ರಮೇಶ ಕೊಠಾರಿ, ಭರತ್ ಜೈನ್, ಜಿತೇಶ್ ಜೈನ್ ಹಾಗೂ 20ರಂದು ನಡೆಯುವ ವಿವಿಧ ಸ್ಪರ್ದೆಗಳ ತೀರ್ಪುಗಾರರಾಗಿ ಕಾರ್ಪೊರೇಟ್ ವಲಯದ ಗಣ್ಯರು ಮತ್ತು ನ್ಯಾಯಾಧೀಶರು ಭಾಗವಹಿಸಲಿದ್ದಾರೆ. ಮೈಂಡ್ ಸೆಟ್ ಮತ್ತು ವೃತ್ತಿ ತರಬೇತುದಾರ ಮಹೇಶ್ ಮಸಾಲ್ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಪ್ರೊ. ಅರುಣ ಕುಬಸದಗೌಡರ ಹಾಗೂ ಇಶಾದ್ ಮುಂಡರಗಿ ಇದ್ದರು
