ಬೆಂಗಳೂರು : ರಾಜಕಾರಣಿಗಳ ಪರಸ್ಪರ ಕಾಳಗ ಕೆಸರೆರಚಾಟ ದಿನವು ನೋಡುತ್ತೇವೆ ಕೇಳುತ್ತೇವೆ. ಆದರೆ, ರಾಜಧಾನಿಯ ಈ ಶಾಲೆ ಎದುರುಗಡೆ ಬಾಲಕಿಯರು ಪರಸ್ಪರ ಜಗಳಕ್ಕೆ ಇಳಿದಿದ್ದಾರೆ. ಹೌದು, ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ವಿದ್ಯಾರ್ಥಿನಿಯರು ಶಾಲೆ ಮುಂದೆ ಗುಂಪೊಂದು ಪರಸ್ಪರ ಹಲ್ಲೆ ನಡೆಸುತ್ತಿರುವ ಘಟನೆ ನಡೆದಿದೆ. ಹುಡುಗಿಯರು ಪರಸ್ಪರ ಹೊಡೆದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರು ಶಾಲಾ ಸಮವಸ್ತ್ರದಲ್ಲಿಯೇ ಇದ್ದಂತೆ ವೈರಲ್ ಆಗುತ್ತಿದೆ. ಘಟನೆ ಇಂದು ನಡೆದಿದೆ ಎಂದು ಹೇಳಲಾಗುತ್ತಿದ್ದು. ಹೊಡೆದಾಟಕ್ಕೆ ಕಾರಣವೂ ಅಧಿಕೃತವಾಗಿ ತಿಳಿದುಬಂದಿಲ್ಲ.
ವೈರಲ್ ಆಗಿರುವ ವಿಡಿಯೋದಲ್ಲಿ ಹುಡುಗಿಯರು ಒಬ್ಬರಿಗೊಬ್ಬರು ಕಪಾಳಮೋಕ್ಷ ಮಾಡುತ್ತಿರುವುದು ಮತ್ತು ಕೂದಲು ಎಳೆದುಕೊಳ್ಳುವುದನ್ನು ಕಾಣಬಹುದು. ಇನ್ನೂ ಯಾವ ಶಾಲೆಯ ವಿದ್ಯಾರ್ಥಿನಿಯರು ಇವರು ಅಂತ ಇನ್ನೂ ಗೊತ್ತಾಗಿಲ್ಲ ಅಲ್ಲದೇ ಇವರು ಪರಸ್ಪರ ಹೀಗೆ ಯಾಕೆ ಕಾಳಗ ಮಾಡಿದ್ದಾರೆ ಎಂಬ ಕಾರಣ ಕೂಡ ಗೊತ್ತಾಗಿಲ್ಲ.