Breaking News

ಯುವ ನಾಯಕ ಹಾರ್ದಿಕ್​ ಪಟೇಲ್ ಕಾಂಗ್ರೆಸ್ ಗೆ ಗುಡ್ ಬೈ

Spread the love

ಅಹ್ಮದಾಬಾದ್: ದೇಶದ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್​ನಲ್ಲಿ ಆಂತರಿಕ ಕಲಹ ಬೂದಿ ಮುಚ್ಚಿದ ಕೆಂಡದಂತಿದೆ. ಪಕ್ಷದ ಹಲವು ರಾಜ್ಯ ಘಟಕಗಳಲ್ಲಿ ಹಿರಿಕಿರಿಯರ ನಡುವೆ ಹೊಂದಾಣಿಕೆ ಕೊರತೆ ಕಂಡುಬರುತ್ತಿದೆ. ಹಿರಿಯರ ವರ್ತನೆಯಿಂದ ಕಿರಿಯರು ಮತ್ತು ಅನೇಕ ಸಂದರ್ಭಗಳಲ್ಲಿ ‘ಕೈ’ ಹಿಡಿದಿದ್ದ ಯುವ ನಾಯಕರು ಅತೃಪ್ತರಾಗಿದ್ಧಾರೆ. ಇದೇ ಹಿನ್ನೆಲೆಯಲ್ಲಿ ಇದೀಗ ಗುಜರಾತ್​​ ಪ್ರಭಾವಿ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ​ದ್ದು ಪಕ್ಷ ತೊರೆದಿದ್ದಾರೆ.
28 ವರ್ಷದ ಹಾರ್ದಿಕ್ 2015ರಲ್ಲಿ ಗುಜರಾತ್​ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುಂದೆ ಬಂದಿದ್ದರು.


Spread the love

About gcsteam

    Check Also

    ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ*

    Spread the loveಹುಬ್ಬಳ್ಳಿ ಮಾ.3: ಇಂದು ಚಿಟಗುಪ್ಪಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮಕ್ಕೆ 5 ವರ್ಷದೊಳಗಿನ ಮಕ್ಕಳಿಗೆ …

    Leave a Reply