Breaking News

ಹಳೇ ಹುಬ್ಬಳ್ಳಿ ಗಲಭೆಯ ಪ್ರಕರಣ- 11 ಪ್ರಕರಣಗಳಿಗೆ ಹೈಕೋರ್ಟ್ ಪೀಠ ಮಧ್ಯಂತರ ತಡೆಯಾಜ್ಞೆ

Spread the love

ಧಾರವಾಡ : ಹಳೇ ಹುಬ್ಬಳ್ಳಿ ಗಲಭೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿಕೊಂಡಿದ್ದ ಪೈಕಿ 11 ಪ್ರಕರಣಗಳಿಗೆ ಹೈಕೋರ್ಟ್ ಪೀಠ, ಮಧ್ಯಂತರ ತಡೆಯಾಜ್ಞೆ ನೀಡಿದೆ.
ಹಳೇ ಹುಬ್ಬಳ್ಳಿಯಲ್ಲಿ ಏ. 16ರಂದು ನಡೆದ ಗಲಭೆಗೆ ಸಂಬಂಧಿಸಿ, ಹಳೆಯ ಹುಬ್ಬಳ್ಳಿಯ ಪೊಲೀಸ್ ಠಾಣೆ ಸೇರಿದಂತೆ ಸುತ್ತಿನ ಪ್ರದೇಶದಲ್ಲಿ ಗಲಾಟೆ ಮಾಡಿದ್ದ 157 ಜನರ ವಿರುದ್ಧ 12 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು.
ಒಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ದೂರುಗಳನ್ನು ದಾಖಲಿಸಿಕೊಂಡಿದ್ದ ಸರಿಯಲ್ಲ. ಹೀಗಾಗಿ ಪೊಲೀಸರು ದಾಖಲಿಸಿಕೊಂಡಿರುವ ಪ್ರಕರಣಗಳು ಅನುರ್ಜಿತಗೊಳಿಸಬೇಕು ಎಂದು ಮಹಮ್ಮದ್ ಆರೀಫ್ ನಾಗರಾಳ ಸೇರಿದಂತೆ ಇತರ 157 ಜನರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ವಾದ- ಪ್ರತಿವಾದ ಆಲಿಸಿದ ಹೈಕೋರ್ಟ್ ನ ಏಕಸದಸ್ಯ ಪೀಠ, ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟು, ಪೊಲೀಸರು ದಾಖಲಿಸಿಕೊಂಡಿದ್ದ 12 ಪ್ರಕರಣಗಳ ಪೈಕಿ, 11 ಪ್ರಕರಣಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿ, ವಿಚಾರಣೆಯನ್ನು ಜೂ. 7ಕ್ಕೆ ಮುಂದೂಡಿತು. ಅರ್ಜಿದಾರರ ಪರವಾಗಿ ವಕೀಲ ವಿಶ್ವನಾಥ ಬೀಚಗತ್ತಿ ವಾದ ಮಂಡಿಸಿದರು.
ಆಧಾರರಹಿತವಾದ ಮೊಬೈಲ್ ಕರೆ; ಹಳೆ ಹುಬ್ಬಳ್ಳಿ ಗಲಭೆ ನಡೆದ ದಿನವಾದ ಸಂದರ್ಭದಲ್ಲಿ ಹಳೇಹುಬ್ಬಳ್ಳಪೊಲೀಸ್ ಠಾಣೆ ಸುತ್ತಲಿನ ಐದು ಮೊಬೈಲ್‌ ಟವರ್‌ಗಳಲ್ಲಿ ರಾತ್ರಿ 8 ರಿಂದ 12,30 ರವರೆಗಿನ ಸಮಯದಲ್ಲಿ ಎಂದಿಗಿಂತ ದುಪ್ಪಟ್ಟು ಕರೆಗಳು ದಾಖಲಾಗಿವೆ‌ ಎಂಬ ಮಾಹಿತಿಯನ್ನು ಸಹ ಸಂಗ್ರಹ ಮಾಡಿದ್ದರು. ಈ ಆಧಾರ ಸರಿಯಾಗಿಲ್ಲ. ಆದ್ದರಿಂದ ಪೊಲೀಸ್
ಠಾಣೆ ಸುತ್ತ–ಮುತ್ತಲಿನ ಕೆಲವು ಕಟ್ಟಡಗಳಲ್ಲಿ ವಿವಿಧ ಕಂಪನಿಗಳ ಸಿಗ್ನಲ್‌ ಟವರ್‌ಗಳಿದ್ದು, ಗಲಭೆ ವೇಳೆ ದಾಖಲಾದ ಕರೆಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕಿದ್ದು ಎಷ್ಟು ಸರಿ ಎಂದು ಸಹ ವಾದ ಮಂಡನೆ ಮಾಡಲಾಗಿದೆ ಎನ್ನಲಾಗಿದೆ.
ನಿತ್ಯ ರಾತ್ರಿ ಆರು ಸಾವಿರ ಕರೆಗಳು ಠಾಣಾ ಸುತ್ತಮುತ್ತಲಿನ ಟವರ್‌ಗಳಲ್ಲಿ ದಾಖಲಾಗುತ್ತಿದ್ದವು. ಆದರೆ, ಗಲಭೆ ನಡೆದ ದಿನ ರಾತ್ರಿ 12.30ಸಾವಿರಕ್ಕೂ ಹೆಚ್ಚು ಕರೆಗಳು ದಾಖಲಾಗಿವೆ. ಗಲಭೆ ನಡೆಯುವ ಸ್ಥಳಕ್ಕೆ ಜನರನ್ನು ಕರೆಯಲು ಕರೆ ಮಾಡಲಾಗಿದೆಯೇ? ಭಯಗೊಂಡ ಸಾರ್ವಜನಿಕರು, ಗಲಭೆ ಕುರಿತು ಮಾಹಿತಿ ನೀಡಲು ತಮ್ಮ ಪರಿಚಯದರು ಹಾಗೂ ಸಂಬಂಧಿಕರಿಗೆ ಕರೆ ಮಾಡಿದ್ದರೇ ಎನ್ನುವ ಮಾಹಿತಿಯನ್ನು ಕಲೆ ಹಾಕಿದ್ದರು.
ಇನ್ನು ಹಳೆ ಹುಬ್ಬಳ್ಳಿ ಗಲಿಭೆಗೆ ಸಂಬಂಧಿಸಿದಂತೆ ಪ್ರಚೋದನೆ ನೀಡುತ್ತಿದ್ದ
ವಸೀಂ ಪಠಾಣ್‌ ಮಾತ್ರ​ವ​ಲ್ಲದೆ ಹುಬ್ಬಳ್ಳಿಯ ತುಫೈಲ್‌ ಮುಲ್ಲಾ, ರೌಡಿಶೀಟರ್‌ ಅಬ್ದುಲ್‌ ಮಲಿಕ್‌ ಬೇಪಾರಿ, ಎಐಎಂಐಎಂ ಮುಖಂಡ ಮೊಹಮ್ಮದ್‌ ಆರೀಫ್‌ನನ್ನೂ ಪೊಲೀ​ಸರು ಬಂಧಿ​ಸಿ​ದ್ದು ಸರಿಯಲ್ಲ. ಅವರ ಮೇಲಿನ ಪ್ರಕರಣಗಳು ಸಹ ವಾಸ್ತವಾದ ಆಧಾರದ ಮೇಲೆ ಇಲ್ಲ ಎಂಬ ವಾದ ಸಹ ಮಾಡಲಾಗಿದೆ.
ಈ ನಾಲ್ವರೂ ಗಲಭೆಯಲ್ಲಿ ಪ್ರಮುಖ ಪಾತ್ರ​ವ​ಹಿ​ಸಿ​ದ್ದರು ಎಂಬ ಆರೋಪ ಸಹ ಒಪ್ಪುವಂಹದಲ್ಲಿ. ವಸೀಂ ಸೂಚನೆಯಂತೆ ಹುಡುಗರು ಕೆಲಸ ನಿರ್ವಹಿಸುತ್ತಿದ್ದರು. ಅಂದು ಕೂಡ ಯುವಕರನ್ನು ಸಂಘಟಿಸಿ ಕರೆತಂದವ​ರವಲ್ಲಿ ಇವರೇ ಪ್ರಮುಖರು ಎಂದು ಪೊಲೀಸ್ ಮೂಲಗಳು ಮಾಹಿತಿ ಕಲೆ ಹಾಕಿದ್ದವು.


Spread the love

About Karnataka Junction

[ajax_load_more]

Check Also

ಅಯೋಧ್ಯೆ ನಗರದಲ್ಲಿ ಚಾಕು ಇರಿತ: ಏಳು ಜನರನ್ನು ಕಂಬಿ ಹಿಂದೆ ಅಟ್ಟಿದ ಖಾಕಿ

Spread the loveಹುಬ್ಬಳ್ಳಿ: ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಜನರನ್ನು ಬಂಧಿಸಿ …

Leave a Reply

error: Content is protected !!