Breaking News

ಮದುವೆಯಲ್ಲಿ ಸಖತ್ ಕುಡಿದು ಕುಣಿದಿದ್ದಕ್ಕೆ ವರನಿಗೆ ಕಾದಿತ್ತು ಶಾಕ್

Spread the love

ರಾಜಸ್ಥಾನ : ರಾಜಸ್ಥಾನದ ಚುರು ಜಿಲ್ಲೆಯಲ್ಲಿ ವರ ಕುಡಿದು ನೃತ್ಯ ಮಾಡಿ ಬಾರಾತ್ ಗಂಟೆಗಳ ಕಾಲ ವಿಳಂಬ ಮಾಡಿದ್ದರಿಂದ ವಧು ಆತನನ್ನು ಮದುವೆಯಾಗಲು ನಿರಾಕರಿಸಿ ಬೇರೆ ಯುವಕನೊಂದಿಗೆ ಮದುವೆಯಾಗಿದ್ದಾಳೆ.

ರಾಜ್‌ ಗಢ ತಹಸಿಲ್‌ನ ಚೇಲಾನಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೇ 15 ರ ಭಾನುವಾರದಂದು ವರ ಸುನೀಲ್ ಮತ್ತು ಆತನ ಸಂಬಂಧಿಕರು ವಧುವಿನ ಗ್ರಾಮಕ್ಕೆ ಆಗಮಿಸಿದ್ದರು. ರಾತ್ರಿ 9 ಗಂಟೆಗೆ ವಧುವಿನ ಮನೆಗೆ ಬಾರಾತ್ ಹೊರಟಿದೆ. ಆದರೆ, ವರ ಮತ್ತು ಅವನ ಸ್ನೇಹಿತರು ಪಾರ್ಟಿ ಮಾಡಿ ಕುಡಿದು ಡಿಜೆ ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ಮುಂದುವರೆಸಿದ್ದಾರೆ. ಇದರಿಂದಾಗಿ ಮೆರವಣಿಗೆ ಗಂಟೆಗಳ ಕಾಲ ವಿಳಂಬವಾಗಿದೆ.

ಕುಡುಕ ವರನ ಕುಣಿತದಿಂದ ವಧುವಿನ ಕಡೆಯವರು ಸಾಕಾಗಿ ಹೋಗಿದ್ದಾರೆ. ವರನಿಗಾಗಿ ಕಾದು ನಿರಾಶೆಗೊಂಡ ವಧು ಬಾರಾತ್ ಹಿಂದಿರುಗಿಸಲು ನಿರ್ಧರಿಸಿದ್ದು, ನಂತರ ಆಕೆಯ ಮನೆಯವರು ಆಕೆಯನ್ನು ಬೇರೆ ಯುವಕನೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದಾರೆ.


Spread the love

About Karnataka Junction

[ajax_load_more]

Check Also

ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಆಗಿ ಶಶಿಕುಮಾರ್ ನೇಮಕ

Spread the loveಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. …

Leave a Reply

error: Content is protected !!