ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಕೆಸರೆರೆಚಾಟಕ್ಕೆ ಹಾಗೂ ಭಾರೀ ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಪಠ್ಯ ಪುಸ್ತಕದಲ್ಲಿನ ಗೊಂದಲಕ್ಕೆ ಸರ್ಕಾರ ಇದೀಗ ತೆರೆ ಎಳೆದಿದೆ. ಶಾಲಾ ಪುಸ್ತಕದಲ್ಲಿ ಟಿಪ್ಪು ವೈಭವೀಕರಣಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದ್ದು, 2ನೇ ಎರಡೇ ಎರಡು ಸಾಲಿನಲ್ಲಿ ಟಿಪ್ಪು ಕುರಿತ ಪಾಠ ಮುಕ್ತಾಯವಾಗುತ್ತದೆ. ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂಬ ಬಿರುದನ್ನು ಕೂಡ ಕಡಿತ ಮಾಡಲಾಗುತ್ತದೆ. ಪಠ್ಯದಲ್ಲಿ ಎಲ್ಲಿಯೂ ಮೈಸೂರು ಹುಲಿ ಟಿಪ್ಪು ಬಳಸಿಲ್ಲ, ಈ ಹಿಂದೆ 6ನೇ ತರಗತಿ ಸಮಾಜ ವಿಜ್ಞಾನ ವಿಷಯದಲ್ಲಿ ಮೈಸೂರು ಹುಲಿ ಟಿಪ್ಪು ಬಳಸಲಾಗಿತ್ತು. ಆದ್ರೆ ಈ ಬಾರಿ ಮೈಸೂರು ವಿಭಾಗದಲ್ಲಿ ಪಠ್ಯದಲ್ಲಿದ್ದ ಟಿಪ್ಪು ವೈಭವೀಕರಣಕ್ಕೆ ಕತ್ತರಿ ಬಿದ್ದಿದೆ.
