Breaking News

ಹೆಚ್ಚು ಮೊಬೈಲ್ ನೋಡಬೇಡ ಎಂದಿದ್ದೇ ತಪ್ಪಾಯ್ತಾ?

Spread the love

ಚಿಕ್ಕಬಳ್ಳಾಪುರ: ಹೆಚ್ಚು ಮೊಬೈಲ್ ನೋಡಬೇಡ ಎಂದು ಪೋಷಕರು ಹೇಳಿದ್ದೆ ತಪ್ಪಾಯ್ತಾ. ಹೌದು, ಹೆಚ್ಚು ಮೊಬೈಲ್ ಬಳಸಬೇಡ ಅಂತಾ ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಹೊರವಲಯದ ತಳಗವಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಮೃತ ದುರ್ದೈವಿಯನ್ನು ಜಯಶ್ರೀ(19) ಎಂದು ಗುರುತಿಸಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಬಸವೇಶ್ವರ ನಗರದ ನರಸಪ್ಪ ಹಾಗೂ ಜಯಲಕ್ಷ್ಮಮ್ಮನವರಿಗೆ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನಿದ್ದ. ಆಟೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ನರಸಪ್ಪ ಮತ್ತು ಕೂಲಿ ಕೆಲಸ ಮಾಡುತ್ತಿದ್ದ ಜಯಲಕ್ಷ್ಮಮ್ಮ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಿದ್ದರು. ಆದರೆ ಭಾನುವಾರ ಬೆಳಗ್ಗೆ ಮನೆಗೆ ಬಂದ ನರಸಪ್ಪ, ಮೊಬೈಲ್ ನೋಡಬೇಡ, ಇಷ್ಟು ಹೊತ್ತಾದರೂ ಎದ್ದಿಲ್ಲ ಅಂತ ಮಗಳಿಗೆ ಬೈದಿದ್ದಾರೆ. ಅದೇ ಕೋಪದಲ್ಲಿ ಮೊಬೈಲ್ ಹೊಡೆದು ಹಾಕಿ ಮನೆಗೆ ಚಿಲಕ ಹಾಕಿಕೊಂಡು ಮನೆಯಿಂದ ಹೊರಟು ಹೋಗಿದ್ದ ಜಯಶ್ರೀ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾಳೆ.


Spread the love

About gcsteam

    Check Also

    ಪಾಕಿಸ್ತಾನ ಜಿಂದಾಬಾದ್ ಅಂತಾ ಎಷ್ಟು ಸಲ ಕೂಗಲಾಗಿದೆ, ಎಷ್ಟು ಜನರನ್ನ ಬಂಧನ ಮಾಡಲಾಗಿದೆ- ಸಚಿವ ಲಾಡ್

    Spread the loveಹುಬ್ಬಳ್ಳಿ; ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಯಾರೇ ತಪ್ಪು ಮಾಡಲಿ ಕ್ರಮ …

    Leave a Reply