https://youtu.be/ws3IyWWcqVk
ಮಂಗ ಸಾವು! ಸಾಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡಿದ ಕುಸುಗಲ್ ಗ್ರಾಮಸ್ಥರು!
ಹುಬ್ಬಳ್ಳಿ:- ವಿದ್ಯುತ್ ತಂತಿ ತಗುಲಿ ಸಾವನಪ್ಪಿರುವ ಕೋತಿಗೆ ಅಂತ್ಯ ಸಂಸ್ಕಾರ ಮಾಡುವ ಮೂಲಕ ಹುಬ್ಬಳ್ಳಿ ತಾಲ್ಲೂಕಿನ ಕುಸುಗಲ್ ಗ್ರಾಮದ ಮಾರುತಿ ನಗರದ ನಿವಾಸಿಗಳು ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ.
ಹೌದು..ಕೋತಿಯೊಂದು ಎಂದಿನಂತೆ ಮನೆಗಳ ಮೇಲೆ ಓಡಾಡುವ ಸಂದರ್ಭದಲ್ಲಿ ಏಕಾಏಕಿ ಹೈವೊಲ್ಟೇಜ್ ವೈಯರ್ ತಗುಲಿದ ಪರಿಣಾಮ, ಸ್ಥಳದಲ್ಲೇ ಸಾವನಪ್ಪಿದ್ದು ಅಲ್ಲೇ ಇದ್ದ ಗ್ರಾಮಸ್ಥರು ಹಣ ಸಂಗ್ರಹಿಸಿ, ಕೋತಿಗೆ ಮನುಷ್ಯನ ಅಂತ್ಯ ಸಂಸ್ಕಾರದಂತೇ ಜೊತೆಗೆ ವಿಧಿವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ಮಾಡುವ ಮೂಲಕ ಮಾನವೀಯತೆ ಮೇರೆದಿದ್ದಾರೆ..ಇದೇ ಸಂದರ್ಭದಲ್ಲಿ ಶಿವರೇಡ್ಡಿ, ಹೇಮರೆಡ್ಡಿ, ರಾಜೇಸಾಬ,ವಿರೇಶ ಸೇರಿದಂತೆ ಇತರರು ಇದ್ದರು.