ಬಾಗಲಕೋಟೆ : ವ್ಯಕ್ತಿಯೊಬ್ಬ ಮಹಿಳಾ ವಕೀಲರ ಮೇಲೆ ದೌರ್ಜನ್ಯ ಎಸಗಿರುವ ವಿಡಿಯೋ ದೇಶಾದ್ಯಂತ ಭಾರೀ ವೈರಲ್ ಆಗಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವಕೀಲೆ ಸಂಗೀತಾ ಶಿಕ್ಕೇರಿ ಅವರ ನೆರೆಹೊರೆಯವರಾದ ಮಹಾಂತೇಶ ಚೋಳಚಗುಡ್ಡ ಅವರ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಟ್ವಿಟರ್ ಮೂಲಕ ಘಟನೆ ಕುರಿತು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮಹಿಳೆ ಮೇಲೆ ಹಲ್ಲೆ ನಡೆಯುತ್ತಿದ್ದರು ಎಲ್ಲರೂ ನೋಡುತ್ತಾ ನಿಂತಿದ್ದಾರೆ ಇದು ಭಾರತೀಯ ಸಂಸ್ಕೃತಿಯ ಅಂತಾ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಹಳ ಕ್ರೂರಿ ಆ ಮನುಷ್ಯ ಅಂತ ಮತ್ತೊಬ್ಬರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಪಾಕಿಸ್ತಾನ, ಅಫ್ಘಾನಿಸ್ತಾನ ಅಲ್ಲ ಭಾರತ. ಈ ದೇಶದಲ್ಲಿ ನಡೆದಿದ್ದು ಬಹಳ ಹೇಯ ಕೃತ್ಯ. ಹಾಡು ಹಗಲಲ್ಲಿ ಅದು ಜನ ನಿಬೀಡ ಪ್ರದೇಶದಲ್ಲಿ ಒಬ್ಬ ವ್ಯಕ್ತಿ ಮಹಿಳೆ ಮೇಲೆ ಕ್ರೂರವಾಗಿ ಹಲ್ಲೆ ಮಾಡುತ್ತಿದ್ದರು ಯಾರೂ ಕೂಡ ಸಹಾಯಕ್ಕೆ ಹೋಗಿಲ್ಲ. ಇದು ಬಹಳ ನಾಚಿಕೆಗೇಡಿನ ಸಂಗತಿ ಅಂತ ಹರಿಹಾಯ್ದಿದ್ದಾರೆ.