ಮುಂಬೈ : ಕುಡಿದು ವಿಮಾನದಲ್ಲಿ ಪ್ರಯಾಣಿಕನೊಬ್ಬ ಗಲಾಟೆ ಮಾಡಿದ್ದಕ್ಕೆ ಮುಂಬೈನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ. ಕತಾರ್‌ನ ರಾಜಧಾನಿ ದೋಹಾದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವಿಮಾನದ ಸಮಯದಲ್ಲಿ ವಿಪರೀತ ಕುಡಿದು ಪ್ರಯಾಣಿಕನೊಬ್ಬ ಗಲಾಟೆಯನ್ನು ಸೃಷ್ಟಿಸಿದ್ದಾನೆ. ಅಲ್ಲದೇ ಸಿಬ್ಬಂದಿ ಮತ್ತು ಇತರ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದನು. ಇದರಿಂದ ಮಾರ್ಗ ಮಧ್ಯೆ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂಡಲೇ ವಿಮಾನ ತುರ್ತು ಭೂಸ್ಪರ್ಶ ಮಾಡಲಾಗಿದೆ. ವಿಮಾನ ಇಳಿದ ನಂತರ, ಶಹರ್ ಪೊಲೀಸರು ಮೊಹಮ್ಮದ್ ಸರ್ಫುದ್ದೀನ್ ಉಲ್ವಾರ್ ಎಂಬ ಪ್ರಯಾಣಿಕರನ್ನು ಬಂಧಿಸಿದ್ದಾರೆ. ಮೇ 14 ರಂದು ಈ ಘಟನೆ ನಡೆದಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಪ್ರಯಾಣಿಕನನ್ನು ಕೇರಳದ ಸರ್ಫುದ್ದೀನ್ ಉಲ್ವಾರ್ ಎಂದು ಗುರುತಿಸಲಾಗಿದೆ. ವಿಮಾನ ಇಳಿದ ತಕ್ಷಣ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಗನಸಖಿಯೊಬ್ಬರು ಮದ್ಯಪಾನ ಮಾಡುವುದನ್ನು ತಡೆಯಲು ಯತ್ನಿಸಿದಾಗ ಉಲ್ವಾರ್ ಅವರ ಜತೆ ಅನುಚಿತವಾಗಿ ವರ್ತಿಸಿ ಸಿಕ್ಕಿಬಿದ್ದಿದ್ದಾರೆ. ಸಹ ಪ್ರಯಾಣಿಕರನ್ನು ನಿಂದಿಸಿದನು ಮತ್ತು ಅವನನ್ನು ತಡೆಯಲು ಪ್ರಯತ್ನಿಸಿದವರೊಂದಿಗೆ ಜಗಳವಾಡಿದ್ದಾಗಿ ತಿಳಿದು ಬಂದಿದೆ.
