ಕಾಸರಗೋಡು : ಕಾಸರಗೋಡಿನಲ್ಲಿ ನಾಲ್ಕು ಪಥದ ಹೆದ್ದಾರಿ ನಿರ್ಮಾಣ ಮಾಡುತ್ತಿರುವ ಉರಾಲುಂಗಲ್ ಲೇಬರ್ ಕಾಂಟ್ರಾಕ್ಟ್ ಕೋ-ಆಪರೇಟಿವ್ ಸೊಸೈಟಿ ಲಿ, 54 ದಿನಗಳ ಕಾಲ ಕಾಮಗಾರಿ ಸ್ಥಗಿತಗೊಳಿಸುವ ಮೂಲಕ ತಾಯಿ ಹೆಬ್ಬಾವು 24 ಮೊಟ್ಟೆಗಳಿಗೆ ಕಾವು ಕೊಡುವ ಮೂಲಕ ಮರಿ ಮಾಡಲು ಅವಕಾಶ ಮಾಡಿಕೊಟ್ಟಿದೆ.
ಅರಣ್ಯ ಇಲಾಖೆ, ಕಂಪನಿ ಮತ್ತು ಉರಗ ರಕ್ಷಕರು, ಎಲ್ಲಾ ಹಾವಿನ ಮರಿಗಳನ್ನು ಜಗತ್ತಿನ ಹೊರಗೆ ತರಲು ಸಂಘಟಿತ ಪ್ರಯತ್ನ ನಡೆಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರ ಅಗಲೀಕರಣ ಭಾಗವಾಗಿ ಮಾರ್ಚ್ 20 ರಂದು ಅಡಿಗಾಲುವೆ (ಕಲ್ವರ್ಟ್ )ನಿರ್ಮಿಸುವ ಕಾರ್ಮಿಕರು ಎರಿಯಾಲ್ ನ ಸಿಪಿಆರ್ ಐಐ ಬಳಿ ಹೆಬ್ಬಾವೊಂದು ಬಿಲದೊಳಗೆ ಸುತ್ತಿಕೊಂಡಿರುವುದನ್ನು ಕಂಡು ಅರಣ್ಯ ಇಲಾಖೆಗೆ ಕರೆ ಮಾಡಿದ್ದರು. ಬಿಲವು ರಸ್ತೆ ಮಟ್ಟದಿಂದ ನಾಲ್ಕು ಅಡಿಗಳಷ್ಟು ಕೆಳಗಿತ್ತು ಮತ್ತು ಮಣ್ಣು ತೆಗೆಯುವ ಅರ್ಥ್ ಮೂವರ್ಸ್ ಮಣ್ಣನ್ನು ಅಗೆಯದಿದ್ದರೆ ಅದು ಎಂದಿಗೂ ಕಾಣುತ್ತಿರಲಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ 10 ವರ್ಷಗಳಿಂದ ಹಾವನ್ನು ರಕ್ಷಿಸುತ್ತಿರುವ ಅಮೀನ್ ಅವರನ್ನು ಅರಣ್ಯ ಇಲಾಖೆ ಕರೆದಿದ್ದು, ಅಡಿಗಾಲುವೆ ಕೆಲಸ ಸ್ಥಗಿತಗೊಳಿಸುವಂತೆ ಯುಎಲ್ ಸಿಸಿಸಿ ಎಸ್ ಕಂಪನಿಗೆ ಹೇಳಿದೆ. ಅಲ್ಲದೇ ಈ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಬೇಕಾಗಿದ್ದರಿಂದ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಸಂಪರ್ಕಿಸಿ ಕೆಲಸ ನಿಲ್ಲಿಸಲು ಅನುಮತಿ ಪಡೆಯಲಾಯಿತು ಎಂದು ವಿಭಾಗೀಯ ಅರಣ್ಯಾಧಿಕಾರಿ ಕಾಸರಗೋಡು ಪಿ.ಬಿಜು ತಿಳಿಸಿದ್ದಾರೆ.