ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಮತ್ತು ಪರಿಷತ್ ಸದಸ್ಯತ್ವಕ್ಕೆ ಬಸವರಾಜ ಹೊರಟ್ಟಿ ಸೋಮವಾರ ರಾಜೀನಾಮೆ ನೀಡಿದ್ದು, ನಾಳೆ ಬಿಜೆಪಿ ಸೇರುವುದಾಗಿ ಘೋಷಿಸಿದ್ದಾರೆ.
ಇಂದು ವಿಧಾನಸೌಧದ ಸಭಾಪತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಹೊರಟ್ಟಿ, ಸಭಾಪತಿ ಸ್ಥಾನಕ್ಕೆ ಹಾಗೂ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಅಲ್ಲದೆ ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸಚಿವಾಲಯದ ಆಡಳಿತದಲ್ಲಿ ಪ್ರಾಮಾಣಿಕ ಪಾರದರ್ಶಕತೆಗೆ ಆದ್ಯತೆ ನೀಡಿದ್ದೇನೆ. ಕಲುಷಿತವಾದ ರಾಜಕಾರಣದಲ್ಲಿ ನಮ್ಮಂತವರಿಗೆ ನೋವು ಆಗಿದೆ. ಆದರೆ ಮನಸ್ಸು ಇಲ್ಲದೆ ಇದ್ದರೂ ರಾಜಕೀಯದಲ್ಲಿ ಇರಬೇಕಾಗುತ್ತದೆ ಎಂದರು.
ಬಿಜೆಪಿ ಸೇರ್ಪಡೆ ಸಂಬಂಧಿಸಿದಂತೆ ಯಾವುದೇ ಷರತ್ತು ಹಾಕಿಲ್ಲ. ಕೇಂದ್ರ ಸಚಿವ ಅಮಿತ್ ಶಾ ಭೇಟಿ ಸಂದರ್ಭದಲ್ಲಿ ಯಾವುದೇ ಚರ್ಚೆ ಆಗಿಲ್ಲ ಎಂದು ಬಸವರಾಜ ಹೊರಟ್ಟಿ ಅವರು ಸ್ಪಷ್ಟಪಡಿಸಿದರು.
ಬಿಜೆಪಿ ರಾಜಕೀಯ ನಿಲುವಿನ ಬಗ್ಗೆ ಆಕ್ಷೇಪ ಇಲ್ಲ. ನನಗೆ ಎಲ್ಲ ಪಕ್ಷದವರು ಸಹಕಾರ ಕೊಟ್ಟಿದ್ದಾರೆ. 1980ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಾಜಕೀಯ ಪ್ರವೇಶ ಮಾಡಿದೆ. 1986 ಜನತಾದಳ, ಲೋಕ ಶಕ್ತಿಯಲ್ಲಿ ಇದ್ದೆ. 2000ದಿಂದ ಇಲ್ಲಿಯವರೆಗೆ ಜೆಡಿಎಸ್‌ನಲ್ಲಿ ಇದ್ದೆ. ಜೆಡಿಎಸ್ ನಲ್ಲಿ ದೇವೇಗೌಡರು ನನ್ನನ್ನು ಕುಟುಂಬ ಸದಸ್ಯರ ತರ ನೋಡಿಕೊಂಡರು ಎಂದರು.
Check Also
ಹಸು ಕೆಚ್ಚಲು ದುರ್ಘಟನೆಯಲ್ಲಿ ಜಮೀರ್ ಅಹ್ಮದ್ ನಾಟಕ ರಚನೆ ಮಾಡ್ತಿದ್ದಾರೆ – ಹೊಸ ಬಾಂಬ್ ಸಿಡಿಸಿದ ಮುತಾಲಿಕ್
Spread the loveಹುಬ್ಬಳ್ಳಿ: ಬೆಂಗಳೂರಿನಲ್ಲಿ ನಡೆದ ಘಟನೆ ಅತ್ಯಂತ ಶೋಚನೀಯ. ಸಚಿವ ಜಮೀರ್ ಅಹ್ಮದ್ ನಾಟಕ ರಚನೆ ಆಡುತ್ತಿದ್ದಾರೆ ಎಂದು …