ಸಾಂಗ್ಲಿ; ಬಹಳ ಆಶಕ್ತಿವುಳ್ಳ ಹೇಳಿಕೆಯನ್ನು ನೀಡಿದವರು
ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ.
ತಾಯಂದಿರ ದಿನದಂತೆ ‘ಪತ್ನಿಯರ ದಿನ’ವನ್ನೂ ಆಚರಿಸಬೇಕೆಂದು ಅವರು ಆಗ್ರಹಿಸಿದರು.
ಮಹಾರಾಷ್ಟ್ರದ ಸಾಂಗ್ಲಿಯಲ್ಲಿನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ತಾಯಿಯು ಜನ್ಮ ನೀಡಿದರೆ, ಪತ್ನಿಯು ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ತನ್ನ ಪತಿಗೆ ಬೆಂಬಲವಾಗಿ ನಿಲ್ಲುತ್ತಾಳೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೊಬ್ಬ ಮಹಿಳೆ ಇರುತ್ತಾಳೆ. ಆದ್ದರಿಂದ ನಾವು ಪತ್ನಿಯರ ದಿನವನ್ನು ಆಚರಿಸಬೇಕು ಎಂದರು. ಮೇ ತಿಂಗಳ ಎರಡನೇ ಭಾನುವಾರ ಅಂತರರಾಷ್ಟ್ರೀಯ ತಾಯಂದಿರ ದಿನವನ್ನಾಗಿ ಆಚರಿಸಲಾಗುತ್ತದೆ. ಆದ್ದರಿಂದ ಒಂದು ದಿನ ಹೆಂಡತಿಯರ ದಿನ ಆಚರಿಸಬೇಕೆಂದು ಒತ್ತಾಯ ಮಾಡಿದರು .
Check Also
ಅನ್ವಿಕಾ ಸುಲ್ತಾನಪುರ ಬುಕ್ ಆಫ್ ರಿಕಾರ್ಡ್ಸ್ ನಲ್ಲಿ ಹೆಸರು ದಾಖಲು
Spread the loveಹುಬ್ಬಳ್ಳಿ : ನಗರದ ಸಂಸ್ಕಾರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 1ನೇ ತರಗತಿಯಲ್ಲಿ ಓದುತ್ತಿರುವ ಆರು ವರ್ಷದ ಬಾಲ …