ಇನ್ನೊಂದು ದುರಂತ ಅಧ್ಯಾಯಕ್ಕೆ ಆಸ್ಟ್ರೇಲಿಯಾ ಸಾಕ್ಷಿ

Spread the love

ಸಿಡ್ನಿ: ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಮತ್ತು ಆಲ್‍ರೌಂಡರ್ ಆ್ಯಂಡ್ರೂ ಸೈಮಂಡ್ಸ್ ಕಾರು ಅಪಘಾತವೊಂದರಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯ ವರದಿಗಳು ಮತ್ತು ಸಹ ಆಟಗಾರರು  ಬಹಿರಂಗಪಡಿಸಿದ್ದಾರೆ. ಶೇನ್ ವಾರ್ನ್ ಹಾಗೂ ರಾಡ್ ಮಾರ್ಷ್ ಅವರಂಥ ಸ್ಟಾರ್ ಆಟಗಾರರು ಅಕಾಲಿಕವಾಗಿ ಮೃತಪಟ್ಟ ಬಳಿಕ ಇನ್ನೊಂದು ಇಂಥ ದುರಂತ ಅಧ್ಯಾಯಕ್ಕೆ ಆಸ್ಟ್ರೇಲಿಯಾ ಸಾಕ್ಷಿಯಾಗಿದೆ.

46 ವರ್ಷ ವಯಸ್ಸಿನ ಸೈಮಂಡ್ಸ್ 26 ಟೆಸ್ಟ್ ಹಾಗೂ 198 ಏಕದಿನ ಪಂದ್ಯಗಳನ್ನು ಆಡಿದ್ದರು. ಶನಿವಾರ ರಾತ್ರಿ ಕ್ವೀನ್ಸ್‍ಲ್ಯಾಂಡ್‍ನ ಟೌನ್ಸ್‍ವಿಲ್ ಪಟ್ಟಣದ ಹೊರವಲಯದಲ್ಲಿ ನಡೆದ ಕಾರು ಅಪಘಾತದಲ್ಲಿ ಅವರು ಮೃತಪಟ್ಟಿದ್ದಾಗಿ ಪ್ರಕಟಿಸಲಾಗಿದೆ.

ಪೊಲೀಸರು ಮತ್ತು ತುರ್ತು ಸೇವಾ ವಿಭಾಗದ ಸಿಬ್ಬಂದಿ ಕಾರಿನ ಚಾಲಕ ಮತ್ತು ಏಕೈಕ ಪ್ರಯಾಣಿಕನ ಜೀವರಕ್ಷಣೆಗೆ ಪ್ರಯತ್ನಿಸಿದರೂ, ಕಾರು ಉರುಳಿಬಿದ್ದಾಗ ಉಂಟಾದ ಗಂಭೀರ ಗಾಯಗಳಿಂದ ಸೈಮಂಡ್ಸ್ ಮೃತಪಟ್ಟರು. ಅಧಿಕಾರಿಗಳು ಸೈಮಂಡ್ಸ್ ಅವರ ಗುರುತನ್ನು ಇನ್ನೂ ದೃಢಪಡಿಸಿಲ್ಲವಾದರೂ, ಹಲವು ಮಾಧ್ಯಮ ಹಾಗೂ ಮಾಜಿ ಆಟಗಾರರು ಸೈಮಂಡ್ಸ್ ಅವರ ಚಹರೆ ದೃಢಪಡಿಸಿದ್ದಾರೆ.


Spread the love

Leave a Reply

error: Content is protected !!