ಇನ್ನು ಹುಬ್ಬಳ್ಳಿ ಏರ್ ಪೋರ್ಟ್ ಗೆ ಬೆಲ್ಜಿಯಂ ಶಫರ್ಡ್‌ ಡಾಗ್ ಕಾವಲು

Spread the love

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯಲ್ಲಿನ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸಬೇಕು ಎಂಬುದು ಚಿಂತನೆ ಇತ್ತು. ಆದರೆ ಯಾವ ರೀತಿಯ ಭದ್ರತೆ ನೀಡಬೇಕು ಎಂಬುದು ಸಹ ಸಾಕಷ್ಟು ಚರ್ಚೆ ಸಹ ಮಾಡಲಾಗಿತ್ತು. ಈಗ ಏರ್ ಪೋರ್ಟ್ ಗೆ ವಿಶೇಷ ಭದ್ರತೆ ನಿಯೋಜನೆ ಮಾಡಲಾಗಿದೆ. ಅದುವೇ ಬೆಲ್ಜಿಯಂ ಶಫರ್ಡ್‌ ಡಾಗ್ ಗಳನ್ನು ಕಾವಲಿಗೆ‌ ಇರಿಸಲಾಗಿದೆ.
ಈ ಡಾಗ್ ಗಳಿಗೆ ಗುರು’ ಹಾಗೂ ‘ಮಾಯಾ’ ಎನ್ನುವ ಹೆಸರು ಇಡಲಾಗಿದ್ದು ಎರಡು ಬೆಲ್ಜಿಯಂ ಶಫರ್ಡ್ ಶ್ವಾನಗಳು ಅತ್ಯಂತ ಚುರುಕಿನಿಂದ ಕಾರ್ಯ ನಿರ್ವಹಣೆ ಮಾಡುತ್ತಿವೆ.
ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯು ಒಂದು ವರ್ಷದ ಬೆಲ್ಜಿಯಂ ಶೆಫರ್ಡ್ ನಾಯಿಗಳನ್ನು ತನ್ನ ಭದ್ರತಾ ತಂಡಕ್ಕೆ ಸೇರಿಸಿಕೊಂಡಿದೆ. ಇದರಿಂದಾಗಿ ನಗರದ ಗೋಕುಲ ರಸ್ತೆಯಲ್ಲಿನವಿಮಾನ ನಿಲ್ದಾಣದ ಭದ್ರತಾ ವಿಭಾಗದ ಬಲ ಹೆಚ್ಚಿದಂತಾಗಿದೆ.
ಬೆಂಗಳೂರಿನಲ್ಲಿ ಸಿಆರ್‌ಪಿಎಫ್ ಶ್ವಾನ ತಳಿ ಮತ್ತು ತರಬೇತಿ ಶಾಲೆಯಲ್ಲಿ ಏಳು ತಿಂಗಳು ಈ ಶ್ವಾನಗಳಿಗೆ ತರಬೇತಿ ನೀಡಲಾಗಿದೆ. ಈ ತಳಿಯ ನಾಯಿಗಳು ಸ್ಫೋಟಕಗಳು ಮತ್ತು ಮಾದಕವಸ್ತುಗಳನ್ನು ವೇಗವಾಗಿ ಪತ್ತೆಹಚ್ಚಲು ವಿಶೇಷವಾಗಿ ತರಬೇತಿ ಪಡೆದಿರುತ್ತವೆ.
‘ಗುರು’ ಶ್ವಾನಕ್ಕೆ ಮಾದಕ ದ್ರವ್ಯಗಳನ್ನು ಪತ್ತೆ ಮಾಡಲು ತರಬೇತಿ ನೀಡಲಾಯಿತು. ‘ಮಾಯಾ’ಗೆ ಸ್ಫೋಟಕಗಳನ್ನು ಪತ್ತೆಹಚ್ಚಲು ಹೇಳಿದ ಪರೀಕ್ಷೆಯಲ್ಲಿ ‘ಪಾಸ್‌’ ಆಯಿತು. ವಿಮಾನಗಳಲ್ಲಿ ಸ್ಫೋಟಕಗಳು, ಮಾದಕ ದ್ರವ್ಯಗಳನ್ನು ಪತ್ತೆಹಚ್ಚಲು ಮತ್ತು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಾಮಗ್ರಿಗಳಲ್ಲಿ ಅಪಾಯಕಾರಿ ವಸ್ತುಗಳಿದ್ದರೆ ಗುರುತಿಸಲು ಶ್ವಾನಗಳನ್ನು ಬಳಸಲಾಗುತ್ತದೆ.
ಭದ್ರತಾ ತಂಡದ ಶ್ವಾನದಳಕ್ಕೆ ಹೊಸ ತಳಿಗಳ ಸೇರ್ಪಡೆ ಸಮಯದಲ್ಲಿ ಭದ್ರತಾ ಪಡೆಯ ಮೂರನೇ ಬೆಟಾಲಿಯನ್‌ನ ಕಮಾಂಡೆಂಟ್‌ ಟಿ. ಫೈಜುದ್ದೀನ್‌, ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದಕುಮಾರ ಠಾಕರೆ, ಇನ್‌ಸ್ಪೆಕ್ಟರ್‌ ಮಹೇಶ ಹುದ್ದಾರ್‌, ಪಿಎಸ್‌ಐ ಹನುಮಂತ ಕರಿ, ಶ್ವಾನ ನಿರ್ವಹಣಾ ಅಧಿಕಾರಿಗಳಾದ ಮಹೇಶ ದೊಡ್ಡಮನಿ, ರಮೇಶ ಉಪ್ಪಾರ, ಫಕೀರಪ್ಪ ಹುಲ್ಲೂರು ಹಾಗೂ ಮಂಜುನಾಥ ಡಿ. ಇವುಗಳ ನಿಯೋಜನೆ ಹೊಣೆ ಹೊತ್ತಿದ್ದಾರೆ.
‘ಗುರು’ ಶ್ವಾನಕ್ಕೆ ಮಾದಕ ದ್ರವ್ಯಗಳನ್ನು ಪತ್ತೆಗೆ ಮತ್ತು ‘ಮಾಯಾ’ಗೆ ಸ್ಫೋಟಕಗಳನ್ನು ಪತ್ತೆಹಚ್ಚಲು ಹೇಳಿದ ಪರೀಕ್ಷೆಯಲ್ಲಿ ‘ಪಾಸ್‌’ ಆದ ತಕ್ಷಣ ವಿಮಾನದ ಭದ್ರತೆಗೆ ನಿಯೋಜನೆ ಮಾಡಲಾಗಿದೆ ‌ ಇನ್ನು ಸ್ಫೋಟಕಗಳು, ಮಾದಕ ದ್ರವ್ಯಗಳನ್ನು ಪತ್ತೆಹಚ್ಚಲು ಮತ್ತು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಾಮಗ್ರಿಗಳಲ್ಲಿ ಅಪಾಯಕಾರಿ ವಸ್ತುಗಳನ್ನು ಸಾಗಿಸುವವರ ಮೇಲೆ ಈ ಡಾಗ್ ಗಳು ವಿಶೇಷ ನಿಗಾ ಇರಿಸಿವೆ.


Spread the love

About gcsteam

    Check Also

    ಕೆಪಿಎಸ್ ಸಿಗೆ ಸುಧಾರಣೆ ಅಗತ್ಯವಾಗಿದೆ : ಶೆಟ್ಟರ್

    Spread the loveಹುಬ್ಬಳ್ಳಿ: ಹಗರಣಗಳು ಇಲ್ಲದೇ ಯಾವುದೇ ನೇಮಕಾತಿ ನಡೆಯಲು ಸಾಧ್ಯವೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದ್ದು, ಗಬ್ಬೆದ್ದು ಹೋಗಿರುವ …

    Leave a Reply