ಬೆಂಗಳೂರ- ಇಲ್ಲಿನ ಕೆಂಗೇರಿ ಮೇಲ್ಸೇತುವೆ ಬಳಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಮೂತ್ರ ವಿಸರ್ಜನೆಗೆ ನಿಲ್ಲಿಸಿ ಅಂತ ನೈಸ್ ರಸ್ತೆಯಲ್ಲಿ ಆರೋಪಿ ನಾಗೇಶ್ ಕೇಳಿಕೊಂಡಿದ್ದನು. ಇದಕ್ಕೆ ಅವಕಾಶ ಕೊಡದ ಪೊಲೀಸರು, ಬೆಂಗಳೂರು ಸಿಟಿಯ ಕೆಂಗೇರಿ ಮೇಲ್ಸೇತುವೆ ಬಳಿ ನಿಲ್ಲಿಸಿದ್ರು. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ನಾಗೇಶ್ ಯತ್ನಿಸಿದ್ದಾನೆ. ಆತನನ್ನ ಹಿಡಿಯಲು ಹೋದ ಕಾನ್ಸ್ ಟೇಬಲ್ ಮಹಾದೇವಯ್ಯ ಎಂಬವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕಲ್ಲಿನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ನಾಗ ಪ್ರಯತ್ನಿಸಿದ್ದನು.
ಈ ವೇಳೆ ಕಾಮಾಕ್ಷಿಪಾಳ್ಯ ಠಾಣೆಯ ಇನ್ ಸ್ಪೆಕ್ಟರ್ ಪ್ರಶಾಂತ್ ಆರೋಪಿಯನ್ನ ಹಿಡಿಯಲು ಗಾಳಿಯಲ್ಲಿ ಒಮ್ಮೆ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಆದರೆ ಇನ್ ಸ್ಪೆಕ್ಟರ್ ಎಚ್ಚರಿಕೆಗೂ ಬಗ್ಗದ ನಾಗೇಶ್ ತಪ್ಪಿಸಿಕೊಳ್ಳಲು ಮುಂದಾಗಿದ್ದನು.
ಆರೋಪಿ ನಾಗೇಶ್ ಬಲಗಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ. ಗುಂಡೇಟು ತಿಂದ ಆರೋಪಿಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಇದೀಗ ಬಿಜಿಎಂ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಘಟನಾ ಸ್ಥಳಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಸಂಜಿವ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಶ್ರಮದಲ್ಲಿ ಸ್ವಾಮೀಜಿ ವೇಷ ಧರಿಸಿ ಅಡಗಿ ಕುಳಿತ್ತಿದ್ದ ಆರೋಪ.
ನಾನು ಏನೂ ಮಾಡೇ ಇಲ್ಲ ಎಂಬಂತೆ ಆಶ್ರಮದಲ್ಲಿ ಅಡಗಿ ಕುಳಿತಿದ್ದಆರೋಪಿ ನಾಗೇಶ್ಬಾಬುವನ್ನು ಪೊಲೀಸರು ಬಂಧಿಸಿದ್ದಾರೆ. ಅಶ್ರಮದಲ್ಲಿ ಮೆಡಿಟೇಷನ್ ಮಾಡುತ್ತಿದ್ದ ಆರೋಪಿಯನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೆ ನಾಗೇಶ್ ಬಾಬು ಆಶ್ರಮಕ್ಕೆ ಸೇರಿದ್ದ, ಅಪ್ಪಟ ದೈವ ಭಕ್ತನಾಗಿರೋ ಆ್ಯಸಿಡ್ ನಾಗ ಆಶ್ರಮದಲ್ಲಿರೋದನ್ನು ಖಚಿತ ಪಡಿಸಿಕೊಂಡ ತಮಿಳುನಾಡು ಪೊಲೀಸರು ಆಶ್ರಮಕ್ಕೆ ಭೇಟಿ ನೀಡಿದ್ರು, ಆರೋಪಿ ನಾಗೇಶ್ ಸಾಧು-ಸಂತನಂತೆ ಧ್ಯಾನಕ್ಕೆ ಕುಳಿತಿದ್ದ. ಈ ವೇಳೆ ಪೊಲೀಸರು ಆರೋಪಿ ನಾಗನನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ಪಟ ದೈವ ಭಕ್ತನಾಗಿದ್ದ ಆರೋಪಿ ನಾಗೇಶ್, ದೇವಸ್ಥಾನ, ಮಠ ರೌಂಡ್ಸ್ ಹೋಗ್ತಿದ್ದ. ಪ್ರತಿ ಶನಿವಾರ ಆಂಜನೇಯ ಸ್ವಾಮಿ ದೇವಾಲಯಕ್ಕೆ ಹೋಗುವ ರೂಢಿ ಕೂಡ ಈತನಿಗಿತ್ತು. ಪೊಲೀಸರ ತನಿಖೆ ವೇಳೆ ಆರೋಪಿ ಮಠ, ಮಂದಿರಗಳಲ್ಲಿ ಇರೋ ಬಗ್ಗೆ ಹೆಚ್ಚು ಮಾಹಿತಿ ಇತ್ತು.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …