ಕಲಬುರಗಿ: ಪಿಎಸ್ ಐ ಅಕ್ರಮ ಪ್ರಕರಣದೊಲ್ಲೊಂದು ಅಪರೂಪದಲ್ಲಿ ಅಪರೂಪ ಎಂಬ ಘಟನೆ ನಡೆದಿದೆ.
ಹೌದು ಪಿಎಸ್ಐ ಪರೀಕ್ಷೆ ಅಕ್ರಮದಲ್ಲಿ ಜೈಲು ಪಾಲಾದ ಡಿಎಸ್ಪಿ ವೈಜನಾಥ ರೇವೂರನನ್ನ ಇಂದು ಕಲಬುರಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ. ವೈಜನಾಥ ರೇವೂರ ಅವರ ಸಿಐಡಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಕಾರಾಗೃಹಕ್ಕೆ ಇಂದು ಶಿಫ್ಟ್ ಮಾಡಲಾಗಿದೆ. ವೈಜನಾಥ ಅವರ ಪತ್ನಿಯೇ ಕಾರಾಗೃಹದ ಜೈಲರ್ ಆಗಿದ್ದಾರೆ.
ಪಿಎಸ್ಐ ಪರೀಕ್ಷೆ ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್ ಜೊತೆಗೆ ನೇರ ಸಂಪರ್ಕಹೊಂದಿದ್ದ ಕೆಎಸ್‌ಆರ್‌ಪಿ ಅಸ್ಸಿಸ್ಟೆಂಟ್ ಕಮಾಂಡಂಟ್(ಡಿಎಸ್ಪಿ) ವೈಜನಾಥ ರೇವೂರ, ಪರೀಕ್ಷಾರ್ಥಿ ಅಭ್ಯರ್ಥಿಗಳು ಹಾಗೂ ಆರ್.ಡಿ.ಪಾಟೀಲ್ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಆರ್.ಡಿ.ಪಾಟೀಲ್‌ನನ್ನ ಪರಿಚಯಿಸಿ ಅಕ್ರಮಕ್ಕಾಗಿ ವ್ಯಾಪಾರ ಕುದಿರಿಸಿದ್ದಾನೆಂಬ ಗಂಭೀರ ಆರೋಪದ ಹಿನ್ನಲೆ ಸಿಐಡಿ ಅಧಿಕಾರಿಗಳು ವೈಜನಾಥರನ್ನು ಮೇ. 06 ರಂದು ಬಂಧಿಸಿದ್ದರು. ನಂತರ ನ್ಯಾಯಾಲಯದ ಅನುಮತಿ ಮೇರೆಗೆ 7 ದಿನಗಳ ಕಾಲ ವೈಜನಾಥ ರೇವೂರನನ್ನು ಕಸ್ಟಡಿಗೆ ಪಡೆದು ಸುದೀರ್ಘ ವಿಚಾರಣೆ ನಡೆಸಿದ ಸಿಐಡಿ ಇಂದು ಜೈಲ್ ಸುಪರ್ದಿಗೆ ಕೊಡಲಾಗಿದೆ.
Check Also
ಗಾಂಜಾ ಮಾರುತ್ತಿದ್ದ 12 ಆರೋಪಿಗಳು ಬಂಧನ*. ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಪೋನ್‌ಗಳು ವಶ. ಎನ್ ಶಶಿಕುಮಾರ್.
Spread the loveಹುಬ್ಬಳ್ಳಿ: ಇಂದು ನಗರದಲ್ಲಿ ಪೊಲೀಸ್ ಆಯುಕ್ತರಾದ ಎನ್ ಶಶಿಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಗಾಂಜಾ ಮಾರಾಟ ಮಾಡುವ …